ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು:* *ಟಿ ಎಸ್ ವಂಟಗೂಡಿ*

 *ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು:*

*ಟಿ ಎಸ್ ವಂಟಗೂಡಿ*




    ರಾಯಬಾಗ:ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು ಎಂದು ಕನ್ನಡ ಪ್ರಾಧ್ಯಾಪಕರು, ಸಾಹಿತಿ ಪ್ರೊ ಟಿ ಎಸ್ ವಂಟಗೂಡಿ ಹೇಳಿದರು.



   ತಾಲೂಕಿನ ಹಿಡಕಲ್ ಗ್ರಾಮದ ವೀರಯೋಧ ಸಚಿನ್ ಗಡದಿ  ಅವರು 2025-26 ರಲ್ಲಿ ಬೆಂಗಳೂರಿನಲ್ಲಿ ಇತ್ತೀಚಿಗೆ ಕೆಲ ತಿಂಗಳುಗಳ ಹಿಂದೆಯೇ ಅಗ್ನಿವೀರ ಯೋಜನೆಯಲ್ಲಿ ಸೇನೆಗೆ ನೇಮಕವಾದ ನಂತರ ಪೂರ್ವ ತರಬೇತಿ ಪಡೆದು ಸೋಮವಾರ ದಿ. 22 ರಂದು ಸ್ವ ಗ್ರಾಮಕ್ಕೆ ಆಗಮಿಸಿದ ಪ್ರಯುಕ್ತ ವೀರಯೋಧ ಸಚಿನ್ ಅವರ ಮನೆಯಲ್ಲಿ ನಡೆದ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿನ್ ಗಡದಿ ಅವರಿಗೆ ಶಾಲು ಹೊದಿಸಿ ಶ್ರೀ ಸಿದ್ದೇಶ್ವರ ಶ್ರೀಗಳ ಭಾವ ಚಿತ್ರ ನೀಡಿ ಅಭಿಮಾನದಿಂದ ಸತ್ಕರಿಸಿ ಅವರು ಮಾತನಾಡಿದರು.


ವೈಯಕ್ತಿಕ ಆಸೆ-ಆಕಾಂಕ್ಷೆಗಳು ಜೀವನದ ಒಂದು ಭಾಗವಾದರೂ, ದೇಶದ ಭದ್ರತೆ, ಏಕತೆ ಹಾಗೂ ಅಭಿವೃದ್ಧಿಗಾಗಿ ಸಲ್ಲಿಸುವ ಸೇವೆ ಶಾಶ್ವತವಾದ ಗೌರವವನ್ನು ತಂದುಕೊಡುತ್ತದೆ. ದೇಶಾಭಿಮಾನವು ಕೇವಲ ಭಾವನೆಯಲ್ಲ, ಅದು ಕರ್ತವ್ಯ ಪ್ರಜ್ಞೆ, ಜವಾಬ್ದಾರಿ ಮತ್ತು ತ್ಯಾಗದ ಮನೋಭಾವವಾಗಿದೆ. ಆದ್ದರಿಂದ ವೈಯಕ್ತಿಕ ಹಿತಕ್ಕಿಂತ ರಾಷ್ಟ್ರದ ಹಿತವನ್ನು ಮುಂದಿಟ್ಟುಕೊಳ್ಳುವ ಚಿಂತನೆಯೇ ನಿಜವಾದ ದೇಶಪ್ರೇಮದ ಸಂಕೇತವಾಗಿದೆ ಎಂದು ಹೇಳಿದರು.


ಪ್ರಗತಿಪರ ರೈತ ಅಶೋಕ ಪೂಜೇರಿ, ಅಮಸಿದ್ದ ವಂಟಗೂಡಿ, ಶಂಕರ ಶೇಖರ ವಂಟಗೂಡಿ, ಪದ್ಮಾವತಿ ಹಾಲವಡೆಯರ, ಯಲ್ಲವ್ವ ಗಡದಿ, ಪರಶುರಾಮ ಗಡದಿ, ಮಾರುತಿ ಗಡದಿ, ಸಿದ್ದು ವಂಟಗೂಡಿ, ಸಾವಿತ್ರಿ ಗಡದಿ, ಹಾಗೂ ಶಾಂತಾ ವಂಟಗೂಡಿ ಉಪಸ್ಥಿತರಿದ್ದರು.


ವರದಿ:ಡಾ. ಜಯವೀರ ಎ. ಕೆ.

     ಖೇಮಲಾಪುರ

Image Description

Post a Comment

0 Comments