*ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪವಿತ್ರ ಹೊಣೆಗಾರಿಕೆ ಮೌಲ್ಯಮಾಪಕರ ಮೇಲಿದೆ:* *ಡಾ. ಎಚ್ ಪಿ ಹಾಲೊಳ್ಳಿ*

 *ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪವಿತ್ರ ಹೊಣೆಗಾರಿಕೆ ಮೌಲ್ಯಮಾಪಕರ ಮೇಲಿದೆ:*

*ಡಾ. ಎಚ್ ಪಿ ಹಾಲೊಳ್ಳಿ* 






  ಬೆಳಗಾವಿ: ಪರೀಕ್ಷೆಯ     ಮೌಲ್ಯಮಾಪನವೆಂದರೆ ಕೇವಲ ಉತ್ತರ ಪತ್ರಿಕೆಗಳಿಗೆ ಅಂಕ    ನೀಡುವ ಪ್ರಕ್ರಿಯೆಯಲ್ಲ; ಅದು ವಿದ್ಯಾರ್ಥಿಗಳ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಮಹತ್ವದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪಕರು ಅತ್ಯಂತ ಪ್ರಾಮಾಣಿಕತೆ, ಶ್ರದ್ಧೆ ಮತ್ತು ನಿಷ್ಪಕ್ಷಪಾತ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಮೌಲ್ಯಮಾಪನ ಕೇಂದ್ರದ ಚೇರಮನ್ ಡಾ. ಎಚ್. ಪಿ. ಹಾಲೊಳ್ಳಿ ಅಭಿಮತ ವ್ಯಕ್ತಪಡಿಸಿದರು.      


 ನಗರದ ಮರಾಠಾ ಮಂಡಳ ಪದವಿ ಕಾಲೇಜಿನಲ್ಲಿ ಶನಿವಾರ ದಿ. 20 ರಂದು ಬಿ ಎ, ಬಿ ಕಾಂ, ಹಾಗೂ ಬಿ ಎಸ್ಸಿ ವಿಭಾಗದ ಕನ್ನಡ ಮೌಲ್ಯ ಮಾಪನ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


.

 ಒಬ್ಬ ವಿದ್ಯಾರ್ಥಿ ತನ್ನ ಶ್ರಮ, ಕನಸು ಮತ್ತು ಭವಿಷ್ಯದ ನಿರೀಕ್ಷೆಗಳನ್ನು ಉತ್ತರ ಪತ್ರಿಕೆಯಲ್ಲಿ ದಾಖಲಿಸಿರುತ್ತಾನೆ. ಆ ಉತ್ತರ ಪತ್ರಿಕೆಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಮೌಲ್ಯಮಾಪಕರು ಯಾವುದೇ ವೈಯಕ್ತಿಕ ಅಭಿಪ್ರಾಯ, ಪೂರ್ವಗ್ರಹ ಅಥವಾ ನಿರ್ಲಕ್ಷ್ಯಕ್ಕೆ ಒಳಗಾಗದೆ, ವಿದ್ಯಾರ್ಥಿಯ ಜ್ಞಾನ ಮತ್ತು ಸಾಮರ್ಥ್ಯಕ್ಕೆ ನ್ಯಾಯ ಒದಗಿಸಬೇಕು 

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚ್ಯವಾಗಿ ನುಡಿದರು. ಒಂದು ಅಂಕದ ವ್ಯತ್ಯಾಸವೂ ಕೆಲವೊಮ್ಮೆ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಅವಕಾಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಂದು ಉತ್ತರವನ್ನು ಸೂಕ್ಷ್ಮವಾಗಿ ಓದಿ, ಮೌಲ್ಯಮಾಪನದ ನಿಯಮಗಳನ್ನು ಪಾಲಿಸಿ, ವಸ್ತುನಿಷ್ಠವಾಗಿ ಅಂಕ ನೀಡುವುದು ಪ್ರತಿಯೊಬ್ಬ ಮೌಲ್ಯಮಾಪಕರ ನೈತಿಕ ಕರ್ತವ್ಯವಾಗಿದೆ.

ಮೌಲ್ಯಮಾಪನ ಕಾರ್ಯದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇದ್ದಾಗ ಮಾತ್ರ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ. ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ; ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಲ್ಪಿಗಳೂ ಹೌದು. ಹೀಗಾಗಿ ಮೌಲ್ಯಮಾಪನದಂತಹ ಮಹತ್ವದ ಕಾರ್ಯದಲ್ಲಿ ಜವಾಬ್ದಾರಿ, ಶಿಸ್ತು ಮತ್ತು ಮಾನವೀಯತೆ ಅಳವಡಿಸಿಕೊಂಡು ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದರು.



, "ಅಂಕ ನೀಡುವುದು ಎಂದರೆ ಕೇವಲ ಮೌಲ್ಯ ನಿರ್ಣಯವಲ್ಲ, ವಿದ್ಯಾರ್ಥಿಯ ಪರಿಶ್ರಮಕ್ಕೆ ನ್ಯಾಯ ನೀಡುವ ಪವಿತ್ರ ಕರ್ತವ್ಯವಾಗಿದೆ.

ಮೌಲ್ಯ ಮಾಪನ ಮಾಡುವ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ನೀಡಿದ ಮಹತ್ವದ ನಿರ್ದೇಶನಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ಗಂಭೀರವಾಗಿ ಈ ಕಾರ್ಯ ಯಶಸ್ವಿಗೊಳಿಸಲು ಸಲಹೆ ನೀಡಿದರು.


ಮರಾಠಾ ಮಂಡಳ ಪದವಿ ಕಾಲೇಜಿನ ಪ್ರಾಚಾರ್ಯ ಡಾ.    ಎಚ್ ಜೆ ಮೋಳೆರಾಖಿ ಮೌಲ್ಯ ಮಾಪನ ಕೇಂದ್ರದ ಸಂಯೋಜಕ ರಾಜು ಹಟ್ಟಿ, ಮೌಲ್ಯಮಾಪನ ಕನ್ನಡ ಪ್ರಾಧ್ಯಾಪಕ ಡಾ ಎಸ್ ಆಯ್ ಭಂಡಾರಿ ಮೌಲ್ಯಮಾಪನ ಕಾರ್ಯದ ಯಶಸ್ವಿಗೊಳಿಸುವ ರೀತಿ ನೀತಿಗಳ ಕುರಿತು ಮಾತನಾಡಿದರು.ವಿವಿಧ ವಿಭಾಗಗದ ಚೇರಮನ್ ರಾದ ಡಾ. ಭಾರತಿ ಗದ್ದಿ, ಡಾ. ವಿಜಯಮಾಲಾ ನಾಗನೂರಿ ಹಾಗೂ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರೊ ಎನ್ ಬಿ ಬೊಮ್ಮನ್ನವರ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ. ಪ್ರಕಾಶ ನರಗುಂದ ವಂದಿಸಿದರು.


ವರದಿ:ಡಾ. ಜಯವೀರ ಎ. ಕೆ.

     ಖೇಮಲಾಪುರ

Image Description

Post a Comment

0 Comments