*ಎ ಎ... ತಮ್ಮಗೋಳಿರ್ಯಾ*

 *ಎ ಎ... ತಮ್ಮಗೋಳಿರ್ಯಾ*







       ೧


ಜಾಲತಾಣದ ಮೋಹದಲಿ ಕಳೆದುಕೊಳ್ಳದಿರಿ ಬದುಕಿನ ಒಲವು,

ಜ್ಞಾನವೆಂಬ ದಾರಿಯಲಿ ಹೆಜ್ಜೆ ಇಟ್ಟರೆ ಸಿಗುವುದು ಗೆಲವು,

ಮೌಲ್ಯಗಳ ಹಣತೆಯ ಹಚ್ಚಿ ಬೆಳಗಿಸಿರಿ ನಿಮ್ಮ ಬದುಕು,

ಎ ಎ... ತಮ್ಮಗೋಳಿರ್ಯಾ, ತಪ್ಪು ದಾರಿಯ ಬಿಟ್ಟು ಸಾಗಿರಿ.



        ೨


ಹೆತ್ತವರ ಕನಸಿಗೆ ನೀವಾಗಿರಿ ಬದುಕಿನ ಬೆಳಕು,

ಅವರ ಬೆವರ ಹನಿಗೆ ನೀಡಿರಿ ಗೌರವದ ಬೆಲೆ,

ಗುರುಗಳ ಮಾರ್ಗದರ್ಶನದಿ ರೂಪಿಸಿಕೊಳ್ಳಿರಿ ನಾಳೆಯ ನೆಲೆ,

ಎ ಎ... ತಮ್ಮಗೋಳಿರ್ಯಾ, ಅಜ್ಞಾನದ ದಾರಿಯ ಬಿಟ್ಟು ಸಾಗಿರಿ.


   ೩


ದುಷ್ಟ ಚಟಗಳ ಬಲೆಗೆ ಸಿಲುಕದಿರಿ ಓ ಯುವ ಜನತೆ,

ಶ್ರಮದ ಹಾದಿಯಲಿ ಕಟ್ಟಿಕೊಳ್ಳಿರಿ ಯಶಸ್ಸಿನ ಘನತೆ 

ಸಮಯದ ಸದುಪಯೋಗದಿಂದ ಬೆಳೆಸಿಕೊಳ್ಳಿರಿ ವ್ಯಕ್ತಿತ್ವದ ಮಹತೆ,

ಎ ಎ... ತಮ್ಮಗೋಳಿರ್ಯಾ, ಕೆಟ್ಟ ಚಾಳಿಗಳ ಬಿಟ್ಟು ಸಾಗಿರಿ.




ಅಪ್ಪನ ಆಸ್ತಿಯ ನೆರಳಲಿ ಕಳೆಯದಿರಿ ಬದುಕಿನ ಕಾಲ,

ದುಡಿಮೆಯ ಬೆವರಿಂದ ಕಟ್ಟಿಕೊಳ್ಳಿರಿ ಭವಿಷ್ಯದ ಮೇಲು,

ನೈತಿಕತೆಯ ದಾರಿಯಲಿ ಸಾಗಿದರೆ ದೊರೆಯುವುದು ಸುಂದರ ಬಾಳು,

ಎ ಎ... ತಮ್ಮಗೋಳಿರ್ಯಾ, ಸೋಮಾರಿತನ ಬಿಟ್ಟು ಸಾಗಿರಿ.




ಕವಿ: ಡಾ. ಜಯವೀರ ಎ. ಕೆ 

     ಖೇಮಲಾಪುರ

Image Description

Post a Comment

0 Comments