*ಯೋಗ: ದೇಹದ ಆರೋಗ್ಯಕ್ಕೆ ಶಕ್ತಿ, ಮನಸ್ಸಿನ ಶಾಂತಿಗೆ ಯುಕ್ತಿ:* *ಡಾ. ಪ್ರಕಾಶ ನರಗುಂದ*

 *ಯೋಗ: ದೇಹದ ಆರೋಗ್ಯಕ್ಕೆ ಶಕ್ತಿ, ಮನಸ್ಸಿನ ಶಾಂತಿಗೆ ಯುಕ್ತಿ:*

*ಡಾ. ಪ್ರಕಾಶ ನರಗುಂದ* 



   ಬೆಳಗಾವಿ:  ಪ್ರಸ್ತುತ  ಬದಲಾಗುತ್ತಿರುವ ಕಾಲ ಘಟ್ಟದ  ಈ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡಲು ಯೋಗವು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಮುದ್ದೇಬಿಹಾಳ ಪಟ್ಟಣದ ಎಂ ಜಿ ವಿ ಸಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು, ಸಾಹಿತಿ ಡಾ. ಪ್ರಕಾಶ ನರಗುಂದ ಹೇಳಿದರು.


    ಜೂನ 21  ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಬೆಳಗಾವಿ ನಗರದ ಮರಾಠಾ ಮಂಡಳ ಪದವಿ ಕಾಲೇಜಿನ ಆವರಣದಲ್ಲಿ ಇಂದು ಮಾಧ್ಯಮ ಪ್ರತಿನಿಧಿಯೊಂದಿಗೆ ತಮ್ಮ ಸ್ವಾನುಭವಗಳನ್ನು ಸೊಗಸಾಗಿ ಹಂಚಿಕೊಂಡರು.


ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ; ಅದು ಉಸಿರಾಟದ ನಿಯಂತ್ರಣ, ಧ್ಯಾನ ಮತ್ತು ಆತ್ಮಶಿಸ್ತಿನ ಮೂಲಕ ಮನಸ್ಸಿನ ಏಕಾಗ್ರತೆ, ಒತ್ತಡ ನಿವಾರಣೆ ಹಾಗೂ ಜೀವನದಲ್ಲಿ ಸಮತೋಲನವನ್ನು ಸಾಧಿಸಲು ಸಹಕಾರಿಯಾಗಿದೆ ಎಂದರು.


ಯೋಗ ಶಿಕ್ಷಣವು ಶಾಲೆ ಮತ್ತು ವಿಶ್ವವಿದ್ಯಾಲಯ ಶಿಕ್ಷಣಕ್ಕೆ ಪೂರಕವಾಗಿದ್ದು, ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ ಹಾಗೂ ಆಂತರಿಕ ಚಿಂತನೆಯ ಬೆಳವಣಿಗೆಗೆ ನೆರವಾಗುತ್ತದೆ. ಆರೋಗ್ಯವಂತ, ಶಿಸ್ತುಬದ್ಧ ಮತ್ತು ಮೌಲ್ಯಯುತ ಯುವ ಸಮುದಾಯ ನಿರ್ಮಾಣದ ಮೂಲಕ ರಾಷ್ಟ್ರದ ಪ್ರಗತಿಗೆ ಯೋಗ ಮಹತ್ವದ ಕೊಡುಗೆ ನೀಡುತ್ತದೆ."ಯೋಗವು ದೇಹ, ಮನಸ್ಸು ಮತ್ತು ಆತ್ಮದ ಸಮನ್ವಯ ಸಾಧಿಸುವ ಜೀವನ ಪದ್ಧತಿಯಾಗಿದ್ದು, ಆರೋಗ್ಯಕರ ಹಾಗೂ ಶಾಂತಿಯುತ ಬದುಕಿಗೆ ಅಮೂಲ್ಯ ಮಾರ್ಗದರ್ಶಿಯಾಗಿದೆ" ಎಂದು ವಿಶ್ಲೇಷಿಸಿದರು.


ವರದಿ:ಡಾ. ಜಯವೀರ ಎ. ಕೆ.

         ಖೇಮಲಾಪುರ

Image Description

Post a Comment

0 Comments