*ವೀರ ಪಥದಲಿ ಹೆಮ್ಮೆಯ ಹೆಜ್ಜೆ*
ಆರು ತಿಂಗಳ ಕಠಿಣ ತರಬೇತಿಯಲಿ ಅರಳಿದೆ ನಿನ್ನ ಶೌರ್ಯ
ಎಂ.ಇ.ಜಿ ಅಂಗಳದಲಿ ಬೆಳಗಿದೆ ನಿನ್ನ ಧೈರ್ಯ
ತಾಯ್ನಾಡ ಸೇವೆಯ ಕನಸಿಗೆ ದೊರಕಿದೆ ಹೊಸ ಸೌಭಾಗ್ಯ
ಪ್ರಜ್ವಲ್ ನಿನ್ನ ಸಾಧನೆಯಲಿ ಮಿನುಗಿದೆ ನಮ್ಮ ಭಾಗ್ಯ
ಸೈನಿಕ ಪಥದಲಿ ಸಾಗುತಿರುವೆ ನೀನು ಹೆಮ್ಮೆಯ ಕುಮಾರ
ತಂದೆ ತಾಯಿಯ ಕನಸಿಗೆ ನೀನಾದೆ ಅಮೂಲ್ಯ ಆಧಾರ
ಗ್ರಾಮದ ಮಣ್ಣಿನ ಕೀರ್ತಿಗೆ ನೀನಾದೆ ಶ್ರೇಷ್ಠ ಶೃಂಗಾರ
ಭಾರತ ಮಾತೆಯ ಸೇವೆಯಲಿ ಹೊಳೆಯಲಿ ನಿನ್ನ ವಿಹಾರ
ದೇಶದ ರಕ್ಷಣೆಯ ದಾರಿಯಲಿ ಮೂಡಲಿ ನಿನ್ನ ಕೀರ್ತಿ
ಕರ್ತವ್ಯದ ಪಥದಲಿ ಸದಾ ಬೆಳಗಲಿ ನಿನ್ನ ಮೂರ್ತಿ
ತಾಯ್ನಾಡ ಸೇವೆಯಲಿ ಮೆರೆದಾಡಲಿ ನಿನ್ನ ಖ್ಯಾತಿ
ಯುಗಯುಗಗಳವರೆಗೆ ಉಳಿಯಲಿ ನಿನ್ನ ಪ್ರಖ್ಯಾತಿ
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments