ಡಾ. ಎಂ ಕೆಂಪಮ್ಮ ಅವರಿಗೆ ಡಾ. ಗೊ.ರು.ಚ ದತ್ತಿ ಪ್ರಶಸ್ತಿ

 ಡಾ. ಎಂ ಕೆಂಪಮ್ಮ ಅವರಿಗೆ ಡಾ. ಗೊ.ರು.ಚ ದತ್ತಿ ಪ್ರಶಸ್ತಿ





ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಾನಪದ ವಿದ್ವಾಂಸರಾದ ಗೊ.ರು ಚನ್ನಬಸವಪ್ಪ ಅವರ ಹೆಸರಿನಲ್ಲಿ ಕೊಡ ಮಾಡುವ 2025 ನೇ ಸಾಲಿನ ಗೊ.ರು.ಚ ಜಾನಪದ ದತ್ತಿ ಪ್ರಶಸ್ತಿಗೆ  ಕೆಂಪಮ್ಮ ಅವರ 'ಮಂಡ್ಯ ಜಿಲ್ಲೆಯ ಅಚರಣಾತ್ಮಕ ಜಾನಪದ 'ಗ್ರಂಥ ಕೃತಿಗೆ ಪ್ರಶಸ್ತಿ ಬಾಜನವಾಗಿದೆ. ಎಂದು ಅಖಿಲ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ ಸೋಮಶೇಖರ ಅವರು ತಿಳಿಸಿದ್ದಾರೆ. ಪ್ರಶಸ್ತಿಯು 10000 ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.



ಡಾ.ಕೆಂಪಮ್ಮ ಅವರು ಮದ್ದೂರು ತಾಲೂಕು ಹೆಚ್ .ಹೊಸೂರು ಗ್ರಾಮದ ಮರೀಗೌಡ ಜಯಮ್ಮ ಅವರ ಮಗಳಾಗಿ 10 .4 .1977 ರಲ್ಲಿ ಜನಿಸಿದರು. ಆದರೆ ಬೆಳೆದು ವಿದ್ಯಾವಂತರಾದದ್ದು ಕಾರ್ಕಹಳ್ಳಿ ಗ್ರಾಮದ ಅಜ್ಜಿ ತಾತನ ಆಶ್ರಯದಲ್ಲಿ . ತಮ್ಮ ನಡೆ ನುಡಿಯಲ್ಲಿ ಇಂದಿಗೂ ಗ್ರಾಮೀಣ ಅಚ್ಚಕನ್ನಡ ಜಾನಪದ ಸೊಗಡನ್ನು ಮೈಗೂಡಿಸಿಕೊಂಡಿರುವ  ಇವರು ಕಳೆದ 25 ವರ್ಷಗಳಿಂದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತ್ಯ- ಸಾಂಸ್ಕೃತಿಕ ಸಂಘಟಕರಾಗಿ ಯುವಸಮೂಹ ಹಾಗೂ  ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಅವರಿಗೆ ಉಚಿತವಾಗಿ  ಜನಪದ ಹಾಡುಗಾರಿಕೆ ಕಲಿಸಿ ಇತರ ಕಲಾಪ್ರಕಾರಗಳಲ್ಲಿ ತರಬೇತಿ ಕೊಡಿಸಿ ಜನಪದ ಕಲೆ ,ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ. 


ಜನಪದ ಸಂಘಟಕರಾಗಿ, ಲೇಖಕರಾಗಿ , ಸಂಗ್ರಹಗಾರರಾಗಿ ಕೆಲಸ ಮಾಡುತ್ತಿದ್ದು, ಜಾನಪದ ಮತ್ತು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇದುವರೆಗೂ 95 ಕ್ಕೂ ಹೆಚ್ಚು ಲೇಖನಗಳನ್ನು ರಾಷ್ಟ್ರ, ರಾಜ್ಯ ಮಟ್ಟದ ಸಂಚಿಕೆ ಹಾಗೂ ಸಂಪುಟಗಳಲ್ಲಿ ಪ್ರಕಟಿಸಿರುತ್ತಾರೆ.  2017 ರಲ್ಲಿ 'ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ" ಎಂಬ ವಿಷಯವಾಗಿ ಸಂಶೋಧನೆ ಮಾಡಿ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 45ಕ್ಕೂ ಹೆಚ್ಚು ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ  ಕಾರ್ಯಾಗಾರ,ವಿಚಾರಸಂಕಿರಣಗಳಲ್ಲಿ ಜಾನಪದ, ಕನ್ನಡ ಸಾಹಿತ್ಯದ ವಿವಿಧ ವಿಷಯಗಳನ್ನು ಕುರಿತು ಪ್ರಬಂಧ ಮಂಡನೆ ಮಾಡಿರುತ್ತಾರೆ. ಮಂಡ್ಯದಲ್ಲಿ ಡಿಸೆಂಬರ್ 20 21 22, 2024  ರಂದು  ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ವೇದಿಕೆಯಲ್ಲಿ ಮಂಡ್ಯ ನೆಲಮೂಲದ ಜಾನಪದ ಮೊದಲುಗಳನ್ನು ಕುರಿತು ವಿಷಯ ಮಂಡಿಸಿರುತ್ತಾರೆ.


 ಲೇಖಕರಾಗಿ-- ಸಂಪಾದಕರಾಗಿರುವ ಅವರ ಈ ಕೆಳಕಂಡ  ಕೃತಿಗಳು ಪ್ರಕಟವಾಗಿವೆ.ಸ್ವರಚಿತ ಕೃತಿಗಳು 

ದಲಿತ ವಚನಕಾರರು,(2018)

ತೋರುಗಂಬ, (2020) ಜಾನಪದ ಗತಿಬಿಂಬ (2021)

ತಳಿಗೆ, (2022)

ಮಂಡ್ಯ ಜಿಲ್ಲೆಯ ಜಾನಪದ ಯಕ್ಷಗಾನ-ಅವಲೋಕನ(2023)

ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ (2025)

ಜಾನಪದಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ (2024) 

ಮಕರಂದ (ಮಧು ಜಿ ಮಾದೇಗೌಡ ಅವರ ಜೀವನ ಸಾಧನೆ ಕುರಿತ) ಜೀವನ ಚರಿತ್ರೆ (2025)

ಪ್ರಗತಿಯ ಹರಿಕಾರ( ಐ. ಆರ್. ಎಸ್ ಅಧಿಕಾರಿ  ಜಯರಾಮ್ ರಾಯಪುರ ಅವರ ಜೀವನ ಚರಿತ್ರೆ) 


ಸಂಪಾದಿತ ಕೃತಿಗಳು

ಮೂಡಲಪಾಯ ಯಕ್ಷಗಾನ ಪುನಶ್ಚೇತನ (2021)

 ಸಮತೆಯ ದೀವಿಗೆ, (2022)

ಬುಜ್ಜಣಿಗೆ  (2022)ರಾಗೌ 80 -ನುಡಿಗೌರವ (2023)

 ಮಾಮರಾ (ಡಾ.ಮ.ರಾಮಕೃಷ್ಣ ಅಭಿನಂದನಾ ಗ್ರಂಥ) ( 2023)

ಸಾಧನಾ ಪಥ (ಹೊನ್ನಲಗೆರೆ ಬಿ ರಾಮಕೃಷ್ಣ ಅಭಿನಂದನಾ ಗ್ರಂಥ) (2023),ರಂಗಾಭಿನಂದನ  (ಪ್ರೊ.ಜಯಪ್ರಕಾಶಗೌಡ ಅಭಿನಂದನಾ ಗ್ರಂಥ) (2024), ಅಭಿವರ್ಧನ (ಪ್ರೊ. ಎ ರಂಗಸ್ವಾಮಿ ಅಭಿನಂದನಾ ಗ್ರಂಥ ), (-2024) 

ನೀಲಿ ಬಾನಿನ ನಕ್ಷತ್ರ (ಯಶೋದ ರಾಗೌ ಸ್ಮೃತಿ ಸಂಪುಟ ),(2024)

 ಮಂಡ್ಯ ಜಿಲ್ಲೆ ಸಂಸ್ಕೃತಿ     ಕಥನ (2025).   ಕುವೆಂಪು ಸಾಹಿತ್ಯ -ಯುವ ನೋಟ (2025 )

ಬೆಲ್ಲದಾರತಿ(ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆನಪಿನ ಸಂಪುಟ ಸಹಸಂಪಾದಕಿ)


. ಸಂಪಾದಿತ  ಸ್ಮರಣ

 ಸಂಚಿಕೆಗಳು

 ಮೂಡಲಪಾಯ (2021) ಮೂಡಲಪಾಯ-1 (2021)

ಮೂಡಲಪಾಯ- 2 (2022) ಸಿರಿ--2 (2023)

ರಂಗಸಿರಿ  (2023) 

ಸಾಹೇಬರ ಸರ್ಕಿಟು (2024)

 ಮೊದಲಾದ 21 ಕೃತಿಗಳು 6 ಸಂಚಿಕೆಗಳು

  ಪ್ರಕಟವಾಗಿವೆ. ಮಂಡ್ಯದ ಕರ್ನಾಟಕ ಸಂಘದ ಹಂಪಿ ವಿವಿ ಮಾನ್ಯತೆಯ ಎಂಎಲ್ ಶ್ರೀಕಂಠೇಶಗೌಡ ಸಂಶೋಧನ ಕೇಂದ್ರದಲ್ಲಿ ಪಿಎಚ್ ಡಿ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ಸಂಘ ನಡೆಸುವ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆಯಲ್ಲಿ ವಿಚಾರ ಸಂಕಿರಣಗಳ ಸಂಚಾಲಕರಾಗಿ  ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ 4 ಮಂದಿ ಸಂಶೋಧನಾರ್ಥಿಗಳು ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

 ಜನಪದ ಕಲೆ, ಸಾಹಿತ್ಯ ಸಂರಕ್ಷಣೆ ದೃಷ್ಟಿಯಿಂದ ಆಸಕ್ತರೊಡಗೂಡಿ 'ಜಾನಪದ ಜನ್ನೆಯರು' ಎಂಬ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ  ,ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.


  ಸ್ವಯಂಸೇವಕಿಯಾಗಿದ್ದ ಇವರು ,

 2017 ರಿಂದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಎನ್.ಎಸ್.ಎಸ್ ಅಧಿಕಾರಿಯಾಗಿ ನೂರಾರು ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ,ಇಲಾಖೆಗಳ ಸಹಕಾರದೊಂದಿಗೆ ಜಿಲ್ಲೆಯಾದ್ಯಂತ 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಿಸಿ 30 ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ನಡೆಸಿ 1015 ಕ್ಕೂ ಯೂನಿಟ್ ರಕ್ತದಚೀಲವನ್ನು ಸಂಗ್ರಹಿಸಿಕೊಟ್ಟಿದ್ದಾರೆ. 27ಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದಾರೆ. ಮಹಿಳಾ ಸಬಲೀಕರಣ,ಏಡ್ಸ್ ಜಾಗೃತಿ ,ಆರೋಗ್ಯ ಅರಿವು, ಪರಿಸರ ಜಾಗೃತಿ, ಕಾನೂನು ಅರಿವು ಸೇರಿದಂತೆ 362ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಇದುವರೆಗೂ ನಡೆಸಿರುತ್ತಾರೆ. 7 ಗ್ರಾಮೀಣ ಶಿಬಿರಗಳನ್ನು ಆಯೋಜಿಸಿದ್ದು, ಸಮುದಾಯ ಪ್ರಗತಿಗೆ ಶ್ರಮಿಸಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಶಿಬಿರಗಳಲ್ಲಿ, ಭಾವೈಕ್ಯತೆ ಶಿಬಿರಗಳಲ್ಲಿ, ಯುವಜನೋತ್ಸವ ಗಳಲ್ಲಿ ಶಿಭಿರಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. 2020 ರಿಂದ 22 ರವರೆಗೆ ಎನ್ಎಸ್ಎಸ್ ಜಿಲ್ಲಾ ನೋಡಲ್ ಅಧಿಕಾರಿಯಾಗಿ 2022 ರಿಂದ ಜಿಲ್ಲಾ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿಗಳು ಇವರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ  ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2019- 20 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯ ಉತ್ತಮ ಕಾರ್ಯಕ್ರಮ ಅಧಿಕಾರಿ ಹಾಗೂ ಘಟಕ ಪ್ರಶಸ್ತಿ 

ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ಉತ್ತಮ ಕಾರ್ಯಕ್ರಮ ಅಧಿಕಾರಿ ಹಾಗೂ ಘಟಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2021ರಲ್ಲಿ ಮಂಡ್ಯ ಜಿಲ್ಲಾಡಳಿತವು ಎನ್.ಎಸ್.ಎಸ್ ನಲ್ಲಿ ಸಲ್ಲಿಸಿದ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಡ್ಯ ಕೃಷಿಕ ಲಯನ್ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

ವಿವೇಕ ಚೇತನ ಟ್ರಸ್ಟ್ ಬೆಂಗಳೂರು ಇವರಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ. (2019)ತೈಲೂರು ಕಲಾಜ್ಯೋತಿ ಬಳಗದ ವತಿಯಿಂದ ಕನ್ನಡಕಲಾ ಜ್ಯೋತಿ ಪ್ರಶಸ್ತಿ (2018) ಜಿಲ್ಲಾ ಸ್ವಾಭಿಮಾನಿ ಪಡೆ ಮಹಿಳಾ ಸಾಧಕಪ್ರಶಸ್ತಿ (.2022)


ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರತ್ನ ಪ್ರಶಸ್ತಿ( 2022,) 

ಎಂ ಶ್ರೀನಿವಾಸ್ ಪುರಸ್ಕಾರ (2023)

 ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ಡಾ. ಅರ್ಜುನಪುರಿ ಅಪ್ಪಾಜಿಗೌಡ ದತ್ತಿ ಪ್ರಶಸ್ತಿ (2023),


ಭಾರತಿ ಎಜುಕೇಶನ್ ಟ್ರಸ್ಟ್ ಕೊಡಮಾಡುವ ಶ್ರೀಮತಿ ಪ್ರಭಾವತಿ ನಂಜಯ್ಯ ಹೆಸರಿನ ವಿಶ್ವವಿದ್ಯಾಲಯ ಮಟ್ಟದ ಉತ್ತಮ ಅಧ್ಯಾಪಕಿ ದತ್ತಿ ಪ್ರಶಸ್ತಿ (2023) 


ಕರ್ನಾಟಕ ಸಂಘ ಕೊಡಮಾಡುವ ಹಾ.ಮಾ.ನಾಯಕ ಜಾನಪದ ಕಿರಿಯ ತಜ್ಞೆ ಪ್ರಶಸ್ತಿ (2026)


ಮಂಡ್ಯ ವಿಶ್ವವಿದ್ಯಾನಿಲಯ ಹಾಗೂ ಡಿ.ಪಾಲ್ ಶಿಕ್ಷಣ ಸಂಸ್ಥೆ ಬೆಳಗೊಳ ಶ್ರೀರಂಗಪಟ್ಟಣ ತಾಲೂಕು ಇವರ ವತಿಯಿಂದ ನ್ಯಾಷನಲ್ ಉಮೆನ್ ಚೇಂಜ್ ಮೇಕರ್ ಅವಾರ್ಡ್ 2026

 ಪಡೆದುಕೊಂಡಿರುತ್ತಾರೆ.


 ಇದಲ್ಲದೆ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರ ಕೆಲಸ ಕಾರ್ಯಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ್ದಾರೆ.

 ಪ್ರಸ್ತುತ ಕರ್ನಾಟಕ ಸರ್ಕಾರವು 2024ನೇ ಸಾಲಿನಿಂದ ಜನಪದ ಕ್ಷೇತ್ರದಲ್ಲಿ ಸಲ್ಲಿಸಿರುವ  ಇವರ ಸೇವೆಯನ್ನು ಗುರುತಿಸಿ  ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಸದಸ್ಯರಾಗಿ ನಾಮನಿರ್ದೇಶನ ಮಾಡಿದೆ. ಪ್ರಸ್ತುತ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಂಜನಗೂಡು ಇಲ್ಲಿಗೆ ವರ್ಗಾವಣೆಗೊಂಡು ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments