*ಈ ಪ್ರಶಸ್ತಿಯು ನನ್ನ ಪಾಲಿಗೆ ಬಯಸದೆ ಬಂದ ಲಿಂಗ ಭೋಗವಾಗಿದೆ:* *ಪ್ರೊ ವಂಟಗೂಡಿ ಅಂತರಾಳದ ಮಾತು*

 *ಈ ಪ್ರಶಸ್ತಿಯು ನನ್ನ ಪಾಲಿಗೆ ಬಯಸದೆ ಬಂದ ಲಿಂಗ ಭೋಗವಾಗಿದೆ:*

*ಪ್ರೊ ವಂಟಗೂಡಿ ಅಂತರಾಳದ ಮಾತು*




ರಾಯಬಾಗ:ಬೋಧನಾ ವೃತ್ತಿಯೊಂದಿಗೆ ರಚನಾತ್ಮಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನನಗೆ ಕವಲಗುಡ್ಡದ ಸಿದ್ದಾಶ್ರಮದ ಪೂಜ್ಯಶ್ರೀ ಅಮರೇಶ್ವರ ಮಹಾರಾಜರು ಶುಭಾ ಆಶೀರ್ವಾದದಿಂದ  ಕರುಣಿಸಿದ ಈ ಪ್ರಶಸ್ತಿಯು ನನ್ನ ಪಾಲಿಗೆ ಬಯಸದೇ ಬಂದ ಲಿಂಗ ಭೋಗವಾಗಿದೆ ಎಂದು ಹಿಡಕಲ್ ಗ್ರಾಮದ ಪ್ರಾಚಾರ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಹಿರಿಯ  ವಾಗ್ಮಿ ಪ್ರೊ ಟಿ ಎಸ್ ವಂಟಗೂಡಿ ಹೇಳಿದರು.


ರವಿವಾರ ದಿ 10 ರಂದು ಕಾಗವಾಡ ತಾಲೂಕು ಕವಲಗುಡ್ಡ ಗ್ರಾಮದ ಸಿದ್ದಾಶ್ರಮದಲ್ಲಿ ನಡೆಯುವ ಗಾಣಗಾರುಡಿಗ ಕವಿಮುನಿ ತಿಲಕ ಶ್ರೀ ಸಿದ್ದರತ್ನ ಮದಗೊಂಡೇಶ್ವರ ಪೂಜ್ಯರ 16 ನೇ ಗುರು ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡ  ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣ್ಯ ವ್ಯಕ್ತಿಗಳು ಸಲ್ಲಿಸಿದ ಅನುಪಮ ಸೇವೆಗಾಗಿ ಕೊಡಮಾಡುವ ಪ್ರಸಕ್ತ ಸಾಲಿನ ಶ್ರೀ ಸಿದ್ದರತ್ನ ಮದಗೊಂಡೇಶ್ವರ ಸದ್ಭಾವನ ಪ್ರಶಸ್ತಿ ಪಡೆದುಕೊಂಡ ಪ್ರಯುಕ್ತ ಇಂದು ಮಾಧ್ಯಮದವರೊಂದಿಗೆ  ತಮ್ಮ ಮನದಾಳದ ಮಾತುಗಳನ್ನು  ಅಭಿಮಾನದಿಂದ ಹಂಚಿಕೊಂಡರು.

 ಸಾಧನೆಗಾಗಿ ಪ್ರಶಸ್ತಿ ಬೇಕೆಂಬ ಮಹದಾಸೆ ನನಗಿಲ್ಲದಿದ್ದರೂ ಇದೊಂದು ದೈವ ಪ್ರಸಾದವೆಂದು ನಾನು ಭಾವಿಸುತ್ತೇನೆ ಎಂದರು. ಗೌರವವು ಹಿಂಬಾಲಿಸಬೇಕಾದ ಗುರಿಯಲ್ಲ, ಅದು ನಿಷ್ಠೆಯಿಂದ ಮಾಡಿದ ಕಾರ್ಯದ ಸಹಜ ಫಲ ಎಂದು ವಿಶ್ಲೇಷಿಸಿದರು.

ನನಗೆ ವಿದ್ಯೆನೀಡಿದ ಸಕಲ ಗುರುಗಳ ಅನುಗ್ರಹ  ಸ್ನೇಹಿತರ ಅಮೂಲ್ಯ ಸಹಕಾರ ಹಿರಿಯರ ಸಮರ್ಥ ಮಾರ್ಗದರ್ಶನದಿಂದ ನಾಡು ನುಡಿ ಸೇವೆಗೆ ಇಡೀ ಜೀವನವನ್ನೇ ಮುಡಿಪಿಟ್ಟಿರುವ ನಾನು ಸಕಲರಿಗೂ ಲೇಸನ್ನೇ ಬಯಸುತ್ತೇನೆ ಎಂದು ವಿನೀತ ಭಾವದಿಂದ ನುಡಿದ ವಂಟಗೂಡಿ ಅವರು ತಂದೆ ತಾಯಿ ಗುರುಗಳ ಋಣ ಎಂದಿಗೂ ತೀರಿಸಲಾಗದು ಎಂದರು.


 ವರದಿ:ಡಾ. ಜಯವೀರ ಎ ಕೆ

      ಖೇಮಲಾಪುರ

Image Description

Post a Comment

0 Comments