## ನಿತ್ಯೋತ್ಸವ ಕವಿ ನಿಸಾರ್ ಅಹ್ಮದ ##

 ## ನಿತ್ಯೋತ್ಸವ ಕವಿ ನಿಸಾರ್ ಅಹ್ಮದ ##



ಜೋಗ ಸಿರಿ ಸೊಬಗ ಕಂಡು

ಮನದಿ ಮೂಡಿತೊಂದು ಕವಿತೆ

ನೆಲದ ಜಲದ ಋಣಕೆ ಭಾವದುಂಬಿ

ಹಾಡಿ, ನಿಮ್ಮ ಮನವು ತಣಿಯಿತು.


'ಗಾಂಧಿ ಬಜಾರಿನಲ್ಲಿ' ನಿಮ್ಮ ನೋಟ

ಬದುಕಿನೊಲುಮೆ ನಿಮ್ಮ 'ನಿತ್ಯೋತ್ಸವ'

ಸಿರಿಯನುಡಿಗೆ ನಿಮ್ಮ ನುಡಿಯ ತೋರಣ

ಒಲವ ನಡೆಗೆ ನಿಮ್ಮಬದುಕೇ ಹೂರಣ.


ಬದುಕ ಪ್ರೀತಿಗೆ ಮೆಟ್ಟಿಲು'ಸುಮುಹೂರ್ತ'

ಒಡೆದ ಹೃದಯಕೆ'ನವೋಲ್ಲಾಸ' ನಿಮ್ಮ ಪದಗಳು

ಹಾಡಿ ಹೇಳಲು ಸಾಲದು ಅನುಭವ

ಮತ್ತೆ ಮತ್ತೆ ಕಾಡುತಿವೆ ನಿಮ್ಮ ಕವಿತೆಗಳು.


 ಬೆರಗಾದವರು ನೀವು ಸಹ್ಯಾದ್ರಿಯ ಉತ್ತುಂಗದ ನಿಲುವಿಗೆ

ಪದಗಳೆದೆಯಲಿ ಇಳಿದು ಹರಿದವರು ನೀವು

'ನೆನೆದವರ ಮನದಲ್ಲಿ'ನೀವು ಸದಾ ಹಸಿರು

ಅದಕೆ 'ಅಮ್ಮ ಆಚಾರ ನಾನು' ಸೊಗಸು ನಿಮ್ಮ ಕನಸು.


ಮಾಸ್ತಿಯ ಹಾಗೆ ನೀವೂ ಒಂದು ಆಸ್ತಿ ಕನ್ನಡಕೆ

ಮೂಡಿ ಬಂತು ನಿಮ್ಮ ಸಿರಿ ಭಾವಕೆ ನನ್ನ ಈ ಕವಿತೆ

ನಿಮಗಿದೋ ನನ್ನ ಗೌರವದ ನುಡಿ ನಮನ

ಅಮ್ಮ ಫೌಂಡೆಶನ್ ನ ಜೊತೆಯಲಿ ನನ್ನ ಪದ ಸಿಂಚನ.


ರಾಚು ಎಸ್. ಕೊಪ್ಪಾ ಬಂಥನಾಳ/ಸಿಂದಗಿ

Image Description

Post a Comment

0 Comments