*ಶೈಕ್ಷಣಿಕ ಸಂಯೋಜಕರ ನೇಮಕ ಸ್ವಾಗತಾರ್ಹ : ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು:* *ಡಾ ರಾಜು ಕಂಬಾರ*

 *ಶೈಕ್ಷಣಿಕ ಸಂಯೋಜಕರ ನೇಮಕ ಸ್ವಾಗತಾರ್ಹ : ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು:*            *ಡಾ ರಾಜು ಕಂಬಾರ*



 ಮೂಡಲಗಿ : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನು ಯುಜಿಸಿ ನಿಯಮಾವಳಿಯಂತೆ ಕೆಲಸದಿಂದ ತೆಗೆದು ಹಾಕಿದ್ದು ಸರ್ಕಾರ, ಈಗ ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಕ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದ್ದು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕೆಂದು  ರಾಜ್ಯ ಅತಿಥಿ ಉಪನ್ಯಾಸಕರ ಮುಖಂಡ ಡಾ. ರಾಜು ಕಂಬಾರ್ ಮಾತನಾಡಿದರು.

          ಪಟ್ಟಣದಲ್ಲಿ ಕಳೆದ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, 2025- 26 ನೇ ಸಾಲಿನಲ್ಲಿ ಯುಜಿಸಿ ನಿಮಾವಳಿಯಂತೆ ನೆಟ್

 ಸೆಟ್, ಪಿಎಚ್. ಡಿ  ವಿದ್ಯಾರ್ಹತೆ ಇಲ್ಲದ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ  ಬಿಡುಗಡೆಗೊಳಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಅವರು ಉದ್ಯೋಗ ಕಳೆದುಕೊಂಡು ಸಮಾಜದಲ್ಲಿ ಅದೋಗತಿಗೆ ಇಳಿದಿದ್ದರು. ಇಂಥವರ ನೆರವಿಗೆ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡು ಶೈಕ್ಷಣಿಕ ಸಂಯೋಜಕರನ್ನಾಗಿ ಮೂರು ವರ್ಷಗಳ ಕಾಲ ತಾತ್ಕಾಲಿಕವಾಗಿ 3800 ಮೇಲ್ಪಟ್ಟ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿರುವುದು ಹಸಿದವರಿಗೆ ಅನ್ನ ನೀಡಿದಷ್ಟೇ ಸಂತ್ರಪ್ತಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.

         ಕೇವಲ ಮೂರು ವರ್ಷಗಳ ಕಾಲ ಮಾತ್ರ ತಾತ್ಕಾಲಿಕವಾಗಿ ಇವರನ್ನು ಶೈಕ್ಷಣಿಕ ಸಂಯೋಜಕರನ್ನಾಗಿ ನೇಮಕ ಮಾಡದೆ, ಇವರಲ್ಲಿ ಬಹುತೇಕರು ವಯೋಮಿತಿ ಮೀರಿದವರಾದುದರಿಂದ 60 ವರ್ಷ ವಯಸ್ಸು ಆಗುವವರೆಗೂ ನಿರಂತರವಾಗಿ ಮುಂದುವರಿಸಬೇಕು. ಅಷ್ಟೇ ಅಲ್ಲದೆ ಈಗ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ 5 ಲಕ್ಷ ಇಡಗಂಟನ್ನು ಶೈಕ್ಷಣಿಕ ಸಂಯೋಜಕರಿಗೂ ಮುಂದುವರಿಸುವ ವಿಷಯ ತಿಳಿಸಿದ ಸರ್ಕಾರ, ಇದನ್ನು ಎಲ್ಲರಿಗೂ 25 ಲಕ್ಷ ಅವರಿಗೆ ಹೆಚ್ಚಿಸಬೇಕೆಂದರು.

         ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯು ಜಿ ಸಿ ವಿದ್ಯಾರ್ಹತೆ ಹೊಂದಿದ  ಅತಿಥಿ ಉಪನ್ಯಾಸಕರು 10 -15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅನುಭವವನ್ನು ಪರಿಗಣಿಸಿ ಹೊಸ ನೇಮಕಾತಿ ಮಾಡಿಕೊಳ್ಳದೆ, ಈಗಿರುವ ಅತಿಥಿ ಉಪನ್ಯಾಸಕರನ್ನೇ ಖಾಯಂ ಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಕಂಬಾರರು, 2023ರ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ -ಕಾಯಮಾತಿ ನೀಡುವ ಕುರಿತು ತಿಳಿಸಿದೆ ಅದರಂತೆ, ಶೀಘ್ರದಲ್ಲಿ ಸರ್ಕಾರ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ವರದಿ:ಡಾ. ಜಯವೀರ ಎ. ಕೆ 

       ಖೇಮಲಾಪುರ

Image Description

Post a Comment

0 Comments