ಬೆಂಗಳೂರು ವಿವಿ: ವಯೋನಿವೃತ್ತಿ ಹೊಂದಿದ್ದ ಶಿವಲಿಂಗ ರವರಿಗೆ ಸನ್ಮಾನಿಸಿದ ಗಣ್ಯರು

 ಬೆಂವಿವಿಯ ಸಿಬ್ಬಂದಿ ಶಿವಲಿಂಗ ಅವರಿಗೆ ಸನ್ಮಾನಿಸಿದ ಪಿಜಿ-2 ವಸತಿ ನಿಲಯ


ಬೆಂಗಳೂರು ವಿವಿ: ವಯೋನಿವೃತ್ತಿ ಹೊಂದಿದ್ದ ಶಿವಲಿಂಗ ರವರಿಗೆ ಸನ್ಮಾನಿಸಿದ ಗಣ್ಯರು





ಬೆಂಗಳೂರು: ಮೇ.08: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುಮಾರು 42 ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಾ, ಇಂದು ಗಾರ್ಡನ್ ಡಿಪಾರ್ಟ್ಮೆಂಟ್ ನಲ್ಲಿ ವಯೋನಿವೃತ್ತಿ ಹೊಂದುತ್ತಿರುವ ಶ್ರೀ ಶಿವಲಿಂಗ ರವರಿಗೆ ವಿವಿಯ (ಪಿಜಿ -2 ಹಾಸ್ಟೆಲ್) ವಸತಿ ನಿಲಯದ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.


ನಂತರ ಮಾತನಾಡಿದ ಪಿಜಿ-2 ಹಾಸ್ಟೆಲ್ ನ ಮುಖ್ಯ ಪ್ರದಾನ ಕ್ಷೇಮಪಾಲಕರು ಹಾಗೂ ತೆಲುಗು ವಿಭಾಗದ ಸಂಯೋಜಕರು ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ.ಡಿ.ಕೆ.ಪ್ರಭಾಕರ್ ರವರು ಶಿವಲಿಂಗರವರು ನಮ್ಮ ವಿಶ್ವವಿದ್ಯಾಲಯದಲ್ಲಿ ಸರಿಸುಮಾರು ಸುದೀರ್ಘಾವಧಿಯ ಅಂದರೆ 42 ವರ್ಷಗಳಿಂದ ನಾನಾ ವಿಭಾಗಗಳಾದ ಹಾಸ್ಟೆಲ್ ಸ್ವಚ್ಚತಾ, ತರಕಾರಿ ಸರಬರಾಜು, ಗಾರ್ಡನ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಕಾರ್ಯಗಳಲ್ಲಿ ಮುಂತಾದ ಕಡೆಗಳಲ್ಲಿ ತಮ್ಮ ತನು ಮನ ದನ ಅರ್ಪಿಸಿಕೊಂಡು ಸೇವೆಯಲ್ಲಿ ಪ್ರತಿಯೊಂದು ಹಂತದ ಕಾಯಕದಲ್ಲಿ ನಿರ್ವಹಿಸಿದ ಹೆಮ್ಮೆಯ ನೌಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ವಿಶೇಷವಾಗಿ ಸ್ನಾತಕೋತ್ತರ ಮತ್ತು ಸಂಶೋಧನಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸ್ಪಂದಿಸುವಂತಹ ಒಳ್ಳೆಯ ಮನಸ್ಸು ಮತ್ತು ಮಾನವೀಯತೆಯ ಮನಸ್ಸುಯುಳ್ಳ ವ್ಯಕ್ತಿತ್ವ, ಈ ಕಾಲದಲ್ಲಿ ಸಿಗುವುದು ಬಹಳ ವಿರಳವೆಂದರು


ಪಿಜಿ-2 ವಸತಿ ನಿಲಯದ ವ್ಯವಸ್ಥಾಪಕರಾದ ಶ್ರೀ ಲಕ್ಷ್ಮಣಪ್ಪ ಕೆ.ವಿ. ಮಾತನಾಡಿ, ಶಿವಲಿಂಗರವರು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಸರಿಯಾದ ಸಮಯಕ್ಕೆ ತರಕಾರಿ ಸರಬರಾಜು ಮಾಡುವ ಕಾರ್ಯ ಮಹತ್ವದ್ದು, ಇನ್ನು ಸಿಬ್ಬಂದಿ ವರ್ಗದವರಲ್ಲಿ ಒಳ್ಳೆಯ ರೀತಿಯಲ್ಲಿ ಸಂಬಂಧ ಹೊಂದಿ, ವಿವಿಯಿ ವಹಿಸಿದ ಎಲ್ಲಾ ಕಾರ್ಯದಲ್ಲಿ ತಮ್ಮ ಮನೆಯಂತೆ ಸೇವೆಯಲ್ಲಿ ಮುಂದೆ ಬರುತ್ತಿದ್ದರು ಎಂದರು.


ಸನ್ಮಾನಿತ ಶಿವಲಿಂಗರವರು ಮಾತನಾಡಿ, ಬೆಂಗಳೂರು ವಿವಿಯಲ್ಲಿ ನಿಲಯಗಳಲ್ಲಿ ಸ್ವಚ್ಚತಾ, ತರಕಾರಿ ಸರಬರಾಜು, ಗಾರ್ಡನ್ ಡಿಪಾರ್ಟ್‌ಮೆಂಟ್ ನ ಕಾರ್ಯದಲ್ಲಿ ಮುಂತಾದ ಕಡೆಗಳಲ್ಲಿ ಪ್ರತಿಯೊಂದು ಹಂತದಲ್ಲಿ ಕೆಲಸ ನಿರ್ವಹಿಸಲು ದೀರ್ಘ ಕಾಲದವರೆಗೂ ಸೇವೆ ಸಲ್ಲಿಸುವ ಸೌಭಾಗ್ಯ ನನ್ನ ಪಾಲಿಗೆ ಬಂದಿದ್ದು, ಇದೊಂದು ನನ್ನ ಜೀವನದ ಅವಿಸ್ಮರಣೀಯ ಕ್ಷಣವೆಂದರು.


ಕಾರ್ಯಕ್ರಮದ ಕೊನೆಯಲ್ಲಿ ಶಿವಲಿಂಗ ಮತ್ತು ಅವರ ಪತ್ನಿಗೆ ನಿಲಯದ ವತಿಯಿಂದ ಪ್ರದಾನ ಕ್ಷೇಮಪಾಲಕರು, ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿ ಮುಂದಿನ ನಿಮ್ಮ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ಪ್ರಧಾನ ಕ್ಷೇಮಪಾಲಕ ಡಾ.ಡಿ.ಕೆ.ಪ್ರಭಾಕರ್, ಸಿಬ್ಬಂದಿ ವರ್ಗದವರಾದ ವ್ಯವಸ್ಥಾಪಕ 

ಕೆ.ವಿ. ಲಕ್ಷ್ಮಣಪ್ಪ, ಮುನಿಕೃಷ್ಣಪ್ಪ ಎಂ, ಹನುಮಂತಪ್ಪ (ಗುಂಡ), 

ಮಂಜೇಗೌಡ, ಸ್ವಾಮಿ, ಧನಂಜಯ, ನವೀನ್ ಕುಮಾರ್ ಎಸ್,  ಗೋಪಿ, ಮಹೇಶ್, ಸಾಕಮ್ಮ, ಸೆಂದಾಮರೈ, ಭರತ್, ನಾಗಾರ್ಜುನ, ಚೆನ್ನಕೇಶವಯ್ಯ, ಮಂಜುನಾಥ್, ವಿದ್ಯಾರ್ಥಿಗಳಾದ ನಾರಾಯಣಸ್ವಾಮಿ, ಶಂಕರ್, ಶಿವು ಮತ್ತಿತರರು ಉಪಸ್ಥಿತರಿದ್ದರು.


ಪೋಟೋ ಕ್ಯಾಪ್ಷನ್:

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ವಯೋನಿವೃತ್ತಿ ಹೊಂದಿದ

ಶಿವಲಿಂಗ ದಂಪತಿಗೆ ಪ್ರಧಾನ ಕ್ಷೇಮಪಾಲಕ ಡಾ.ಡಿ.ಕೆ.ಪ್ರಭಾಕರ್, ವ್ಯವಸ್ಥಾಪಕ  ಕೆ.ವಿ. ಲಕ್ಷ್ಮಣಪ್ಪ, ಮುನಿಕೃಷ್ಣಪ್ಪ ಎಂ, ಮುಂತಾದ ಸಿಬ್ಬಂದಿಗಳು ಸೇರಿ ಪಿಜಿ -2 ಹಾಸ್ಟೆಲ್ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿದರು.


ಕೋಟ್1:

ಶಿವಲಿಂಗ ಅವರು ವಿವಿಯಲ್ಲಿ ವಿಶೇಷವಾಗಿ ಸ್ನಾತಕೋತ್ತರ ಮತ್ತು ಸಂಶೋಧನಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸ್ಪಂದಿಸುವಂತಹ ಒಳ್ಳೆಯ ಮನಸ್ಸು ಮತ್ತು ಮಾನವೀಯತೆಯ ಮನಸ್ಸುಯುಳ್ಳ ವ್ಯಕ್ತಿತ್ವ, ಈ ಕಾಲದಲ್ಲಿ ಸಿಗುವುದು ಬಹಳ ವಿರಳ, ಎಲ್ಲರೂ ಮುಚ್ಚುವಂತೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದು ಹೆಮ್ಮೆಯ ಸಂಗತಿ.

- ಡಾ.ಡಿ.ಕೆ.ಪ್ರಭಾಕರ್, ಪಿಜಿ-2 ವಸತಿ ನಿಲಯದ, ಮುಖ್ಯ ಪ್ರಧಾನ ಕ್ಷೇಮಪಾಲಕರು.


ಕೋಟ್2:

ಬೆಂಗಳೂರು ವಿವಿಯಲ್ಲಿ ಹಾಸ್ಟೆಲ್ ಸ್ವಚ್ಚತಾ, ತರಕಾರಿ ಸರಬರಾಜು ಮತ್ತು ಗಾರ್ಡನ್ ಡಿಪಾರ್ಟ್‌ಮೆಂಟ್ ನ ಮುಂತಾದ ಕಡೆಗಳಲ್ಲಿ ಪ್ರತಿಯೊಂದು ಹಂತದಲ್ಲಿ ಕೆಲಸ ನಿರ್ವಹಿಸಲು ದೀರ್ಘ ಕಾಲದವರೆಗೂ ಸೇವೆ ಸಲ್ಲಿಸುವ ಸೌಭಾಗ್ಯ ನನ್ನ ಪಾಲಿಗೆ ಬಂದಿದ್ದು, ಇದೊಂದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದರೆ ತಪ್ಪಾಗಲಾರದು.

- ಶಿವಲಿಂಗ, ಬೆಂಗಳೂರು ವಿವಿಯ ನಿವೃತ್ತ ನೌಕರ

Image Description

Post a Comment

0 Comments