*ಯಶಸ್ವಿನಿ ಕಾರ್ಡ್ ಬಡವರ ಬದುಕಿಗೆ ಭರವಸೆಯ ಭದ್ರತೆಯ ಆಶಾಕವಚವಾಗಿದೆ:* *ಮಹಾದೇವ ಕಡಕಭಾವಿ*

 *ಯಶಸ್ವಿನಿ ಕಾರ್ಡ್ ಬಡವರ ಬದುಕಿಗೆ ಭರವಸೆಯ ಭದ್ರತೆಯ ಆಶಾಕವಚವಾಗಿದೆ:* 

*ಮಹಾದೇವ ಕಡಕಭಾವಿ*




  ರಾಯಬಾಗಾಗ:  ಯಶಸ್ವಿನಿ ಕಾರ್ಡ್” ಕೇವಲ ಆರೋಗ್ಯ ಸೇವೆಯ ಗುರುತಿನ ಚೀಟಿಯಲ್ಲ; ಮಧ್ಯಮ ವರ್ಗ  ಬಡವರ ಹಾಗೂ ಸಾಮಾನ್ಯ ಜನರ ಬದುಕಿಗೆ ಸರ್ಕಾರ ನೀಡಿದ ಭರವಸೆಯ ಭದ್ರತಾ ಕವಚವಾಗಿದೆ ಎಂದು        ಪಿಕೆಪಿಎಸ್( ದಕ್ಷಿಣ ಭಾಗ)     ಅಧ್ಯಕ್ಷ ಮಹಾದೇವ ಕಡಕಭಾವಿ  ಹೇಳಿದರು.



 ತಾಲೂಕಿನ ಖೇಮಲಾಪುರ ತೋಟದ ಜನತಾ ವಿವಿದೋದ್ದೇಶ ಸಹಕಾರಿ ಸಂಘದ ಕಚೇರಿಯಲ್ಲಿ ಗುರುವಾರ ದಿ.7 ರಂದು  ರಾಜ್ಯ ಸಹಕಾರ ಇಲಾಖೆ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ಕೊಡಮಾಡುವ ಗ್ರಾಮದ ಡಾ. ಜಯವೀರ ಎ. ಕೆ. ದಂಪತಿಗಳಿಗೆ  ಯಶಸ್ವಿನಿ ಕಾರ್ಡ್ ವಿತರಿಸಿ ಅವರು ಮಾತನಾಡಿದರು.


 ಇದು ಸಮಾಜದ ಮಧ್ಯಮ ವರ್ಗ ಹಾಗೂ ಬಡಜನರ ಆರೋಗ್ಯ ಭದ್ರತೆಗೆ ನೀಡಿರುವ ಮಹತ್ವದ ಸಂಕೇತವಾಗಿದೆ. ಇಂದಿನ ಕಾಲಘಟ್ಟದಲ್ಲಿ ಚಿಕಿತ್ಸಾ ವೆಚ್ಚಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ, ಒಂದು ಸಾಮಾನ್ಯ ಕುಟುಂಬಕ್ಕೆ ಆರೋಗ್ಯ ಸಮಸ್ಯೆ ಆರ್ಥಿಕ ಸಂಕಷ್ಟದ ರೂಪ ತಾಳುವುದು ಕಟು ವಾಸ್ತವವಾಗಿದೆ. ಇಂತಹ ಸಂದರ್ಭದಲ್ಲಿ ಯಶಸ್ವಿನಿ ಯೋಜನೆ ಜನಸಾಮಾನ್ಯರ ಬದುಕಿಗೆ ಆಶಾಕಿರಣವಾಗಿ ಕಾಣಿಸುತ್ತದೆ ಎಂದರು.


ವಿಶೇಷವಾಗಿ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು ಹಾಗೂ ಸಹಕಾರ ಸಂಘಗಳ ಸದಸ್ಯರಿಗೆ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. “ಅನಾರೋಗ್ಯ ಬಂದರೆ ಕುಟುಂಬವೇ ಸಾಲದ ಬಲೆಗೆ ಸಿಲುಕುತ್ತದೆ” ಎನ್ನುವ ಭಯದ ನಡುವೆ ಯಶಸ್ವಿನಿ ಕಾರ್ಡ್ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಇದು ಕೇವಲ ಚಿಕಿತ್ಸೆಯ ನೆರವಲ್ಲ; ಜನರಲ್ಲಿ “ನಾವು ಒಂಟಿಯಲ್ಲ” ಎಂಬ ವಿಶ್ವಾಸವನ್ನೂ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು. 

ಇದರಿಂದ ಸಹಕಾರ ಸಂಘಗಳ ನಿಜವಾದ ಸಾಮಾಜಿಕ ಬದ್ಧತೆಯೂ ಸ್ಪಷ್ಟವಾಗುತ್ತದೆ. ಸಹಕಾರ ವ್ಯವಸ್ಥೆ ಎಂದರೆ ಕೇವಲ ಸಾಲ-ಸೌಲಭ್ಯಗಳ ವಹಿವಾಟಲ್ಲ; ಸದಸ್ಯರ ಬದುಕಿನ ಭದ್ರತೆಗೆ ಕೈಜೋಡಿಸುವ ಮಾನವೀಯ ಚಿಂತನೆಯೂ ಆಗಿದೆ ಎಂಬುದನ್ನು ಇಂತಹ ಯೋಜನೆಗಳು ಸಾರುತ್ತವೆ.

ಆದ್ದರಿಂದ ಯಶಸ್ವಿನಿ ಕಾರ್ಡ್ ಪಡೆಯುವುದು ವೈಯಕ್ತಿಕ ಗೌರವದ ಸಂಗತಿಯಷ್ಟೇ ಅಲ್ಲ, “ಆರೋಗ್ಯವೇ ಆಸ್ತಿ” ಎನ್ನುವ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಾಮಾಜಿಕ ಜವಾಬ್ದಾರಿಯ ಪ್ರತೀಕವೂ ಆಗಿದೆ. ಇಂದು ಕೈಗೆ ಬಂದಿರುವ ಈ ಚಿಕ್ಕ ಕಾರ್ಡ್, ನಾಳೆಯ ಅನಿಶ್ಚಿತ ಬದುಕಿಗೆ ದೊಡ್ಡ ನೆಮ್ಮದಿಯ ನೆರಳಾಗಬಹುದೆಂದರು. ಸಂಘದ ಕಾರ್ಯದರ್ಶಿ ಸಾಗರ ಕಡಕಭಾವಿ ಕರಣಿಕ ಮಹಾದೇವ ಮಗದುಮ್ ಉಪಸ್ಥಿತರಿದ್ದರು.


ವರದಿ:ಡಾ. ಜಯವೀರ ಎ. ಕೆ.

     ಖೇಮಲಾಪುರ

Image Description

Post a Comment

0 Comments