*ಡಾ. ಜಯವೀರ ಅವರ ಪ್ರಾಮಾಣಿಕತೆ, ನಿಷ್ಠೆಗೆ ಸಂದ ಗೌರವ:* *ವಿ.ಪಿ. ಗಲಗಲಿ*

 *ಡಾ. ಜಯವೀರ ಅವರ ಪ್ರಾಮಾಣಿಕತೆ, ನಿಷ್ಠೆಗೆ ಸಂದ ಗೌರವ:*

*ವಿ.ಪಿ. ಗಲಗಲಿ*




ರಾಯಬಾಗ: ಜನಮನ ಗೆದ್ದ ಕನ್ನಡ ಪ್ರಾಧ್ಯಾಪಕರು, ಕ್ರಿಯಾಶೀಲ ಪತ್ರಕರ್ತರು ಹಾಗೂ ಭರವಸೆಯ ಬರಹಗಾರರಾಗಿ ಗುರುತಿಸಿಕೊಂಡಿರುವ ಡಾ. ಜಯವೀರ ಎ.ಕೆ. ಅವರ ವ್ಯಕ್ತಿತ್ವಕ್ಕೆ ದೊರಕುತ್ತಿರುವ ಗೌರವಗಳು ಅವರ ಪ್ರಾಮಾಣಿಕತೆ, ನಿಷ್ಠೆ ಮತ್ತು ನಿರಂತರ ಸಾಮಾಜಿಕ ಬದ್ಧತೆಯ ಪ್ರತಿಫಲವಾಗಿವೆ ಎಂದು ಸಿದ್ದಾಪುರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾತ್ಮಿಕ ಚಿಂತಕರಾದ ವಿ.ಪಿ. ಗಲಗಲಿ ಹೇಳಿದರು.


ತಾಲೂಕಿನ ಖೇಮಲಾಪುರದ ಸಾಹಿತಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಜಯವೀರ ಎ.ಕೆ. ಅವರಿಗೆ ಇತ್ತೀಚೆಗೆ ಲಭಿಸಿದ “ರಾಷ್ಟ್ರೀಯ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ” ಪ್ರಯುಕ್ತ ಬುಧವಾರ ದಿ.6 ರಂದು ಅವರ ತೋಟದ ಮನೆಯಲ್ಲಿ ನಡೆದ ಸರಳ ಸನ್ಮಾನ ಕಾರ್ಯಕ್ರಮದಲ್ಲಿಡಾ. ಜಯವೀರ ಎ. ಕೆ. ದಂಪತಿಗಳಿಗೆ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸತ್ಕರಿಸಿ ಅವರು ಮಾತನಾಡಿದರು.                     


, ಡಾ. ಜಯವೀರ ಅವರು ಬದುಕಿನ ಎಲ್ಲ ಹಂತಗಳಲ್ಲೂ ಮೌಲ್ಯಾಧಾರಿತ ಚಿಂತನೆಗೆ ಆದ್ಯತೆ ನೀಡುತ್ತ ಬಂದಿರುವುದು ವಿಶೇಷವೆಂದರು.

“ಸತ್ಸಂಗ, ಸಾಹಿತ್ಯ ಮತ್ತು ಸಮಾಜಮುಖಿ ಚಿಂತನೆಗಳ ನಡುವೆ ಬದುಕು ಕಟ್ಟಿಕೊಂಡಿರುವ ಡಾ. ಜಯವೀರ ಅವರು ಸದಾ ಸಕಲರ ಒಳಿತನ್ನೇ ಬಯಸುವ ವ್ಯಕ್ತಿತ್ವ ಹೊಂದಿದ್ದಾರೆ. ಗುರುಹಿರಿಯರ ಆಶೀರ್ವಾದ, ಕಠಿಣ ಪರಿಶ್ರಮ ಹಾಗೂ ಕ್ರಿಯಾಶೀಲ ಮನೋಭಾವದಿಂದ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಮೂಡಿಸಿರುವ ಅವಿಸ್ಮರಣೀಯ ಹೆಜ್ಜೆಗುರುತುಗಳು  ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಿವೆ. ಸ್ವಸಾಮರ್ಥ್ಯದಿಂದ  ಮೆಟ್ಟಿಲೇರಿದ ಅವರ ಬದುಕು ಮತ್ತು ಬರಹ ಇನ್ನಷ್ಟು ಸಿರಿವಂತವಾಗಲಿ ಎಂದು ಮನಃಪೂರ್ವಕವಾಗಿ ಹಾರೈಸಿದರು. ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಡಾ. ಜಯವೀರ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶಿಷ್ಟ ಪ್ರಶಸ್ತಿಗಳು ಅರಸಿ ಬರಲಿ ಎಂದು ಶುಭಕೋರಿದರು.

ಈ ಸಂದರ್ಭದಲ್ಲಿ ವಿ.ಪಿ. ಗಲಗಲಿ ಅವರ ಪುತ್ರಿ ಕು. ಸ್ವಾತಿ ಗಲಗಲಿ ಹಾಗೂ ಡಾ. ಜಯವೀರ ಎ.ಕೆ. ಅವರ ಪುತ್ರಿ ಕು. ಪ್ರಜ್ಞಾ ಉಪಸ್ಥಿತರಿದ್ದರು.


ವರದಿ:ಡಾ. ವಿಲಾಸ ಕಾಂಬಳೆ

Image Description

Post a Comment

0 Comments