ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿ ಬದುಕಿಗೆ ಹೊಸ ದಾರಿ: ಪ್ರಾಂಶುಪಾಲ ಡಾ. ಅರಕೆರೆ ವೆಂಕಟೇಶ್
ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏಳು ದಿನದ ಸಮಾಜಮುಖಿ ಚಿಂತನೆಗೆ ಸಾಕ್ಷಿ: ಎನ್ಎಸ್ಎಸ್ ಶಿಬಿರ
ಬೆಂಗಳೂರು: ಮೇ.05: ವಿದ್ಯಾರ್ಥಿಗಳು ಕೇವಲ ಪದವೀಧರರಾಗದೆ, ಸಾಮಾಜಿಕ ಕಳಕಳಿಯಿರುವ ಜವಾಬ್ದಾರಿಯುತ ನಾಗರಿಕರಾದಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವ ಪ್ರೊ. ಸುಂದರಾಜ್ ಅರಸು ಅವರ ಅಭಿಪ್ರಾಯಪಟ್ಟರು.
ನಗರದ ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕವು ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿವಿಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ರಮೇಶ್ ಕಿತ್ತೂರು ಅವರು ಮಾತನಾಡಿ, ಸೇವೆಯೇ ಯುವಶಕ್ತಿಯ ಮೂಲ ಮಂತ್ರವಾದಾಗ ಮಾತ್ರ, ಎನ್ಎಸ್ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಮತ್ತು ಸಂಘಟನಾ ಶಕ್ತಿಯನ್ನು ಬೆಳೆಸುತ್ತವೆ. ಶ್ರಮದಾನದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೂ ಸ್ಪಂದಿಸುವ ಗುಣವನ್ನು ವಿದ್ಯಾರ್ಥಿಗಳು ಇಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರಕೆರೆ ವೆಂಕಟೇಶ್ ಅವರು ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ಸೇವಾ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಜ್ಞಾನಭಾರತಿಯ ಈ ಪರಿಸರದಲ್ಲಿ ನಡೆಯುತ್ತಿರುವ ಎನ್ಎಸ್ಎಸ ಶಿಬಿರದಿಂದ ವಿದ್ಯಾರ್ಥಿಗಳ ಬದುಕಿಗೆ ಹೊಸ ದಾರಿಯನ್ನು ತೋರಿಸಲಿದೆ ಎಂದು ಆಶಿಸಿದರು.
ವಿಶೇಷವಾಗಿ ಶಿಬಿರದಲ್ಲಿ ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಡಿ.ಡಿ ಗಂಗರಾಜು ಭಾಗಿಯಾಗಿ ವಿದ್ಯಾರ್ಥಿಗಳಿಗೆ ಹಿತ ನುಡಿಯನ್ನು ನುಡಿದರು.
ಈ ಬಾರಿಯ ಶಿಬಿರದ ಯಶಸ್ಸಿನ ಹಿಂದೆ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೆ.ಎಂ. ಬಸವಯ್ಯ ಅವರ ಶ್ರಮ ಅನನ್ಯವಾದುದು. ಶಿಬಿರದ ಬೆನ್ನೆಲುಬಾಗಿ ನಿಂತು ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಬಸವಯ್ಯ ಅವರ ಕಾರ್ಯವೈಖರಿಯನ್ನು ಗಣ್ಯರು ಶ್ಲಾಘಿಸಿದರು.
ಶಿಬಿರದ ಯಶಸ್ವಿ ನಿರ್ವಹಣೆಯಲ್ಲಿ ಎನ್ಎಸ್ಎಸ್ ಅಧಿಕಾರಿ ಸಹ ಪ್ರಾಧ್ಯಾಪಕ ಸಿ. ಚಂದ್ರಶೇಖರ್ ಹಾಗೂ ಸಹ ಶಿಬಿರ ಅಧಿಕಾರಿ ಪ್ರೊ. ನಂಜುಂಡ ಮೂರ್ತಿ, ಸಹ ಪ್ರಾಧ್ಯಾಪಕರಾದ ಪ್ರಭಾವತಿ ವಾಣಿಜ್ಯ ವಿಭಾಗ ಇವರು ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಶಿಸ್ತುಬದ್ಧ ಶಿಬಿರಕ್ಕೆ ನಾಂದಿ ಹಾಡಿದ್ದಾರೆ.
ಇದೇ ವೇಳೆಯಲ್ಲಿ ಮಾಜಿ ಕುಲಸಚಿವ ಪ್ರೊ. ಸುಂದರಾಜ್ ಅರಸು, ಡಾ. ರಮೇಶ್ ಕಿತ್ತೂರು, ಪ್ರಾಂಶುಪಾಲ ಡಾ. ಅರಕೆರೆ ವೆಂಕಟೇಶ್, ಸಿಂಡಿಕೇಟ್ ಸದಸ್ಯ ಡಿ.ಡಿ ಗಂಗರಾಜು,ಡಾ. ಕೆ.ಎಂ. ಬಸವಯ್ಯ, ಸಿ. ಚಂದ್ರಶೇಖರ್, ಪ್ರೊ. ನಂಜುಂಡ ಮೂರ್ತಿ, ಸಹ ಪ್ರಾಧ್ಯಾಪಕಿ ಪ್ರಭಾವತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಯನಗರ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಶೇಷಗಿರಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬ್ಯಾಟಗಯ್ಯ, ಗ್ರಂಥಾಪಾಲಕ ನರಸಿಂಹಯ್ಯ, ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕೇತರ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಶನ್:
ಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಜ್ಞಾನಭಾರತಿ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.
ಕೋಟ್:
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ಸೇವಾ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಜ್ಞಾನಭಾರತಿಯ ಈ ಪರಿಸರದಲ್ಲಿ ನಡೆಯುತ್ತಿರುವ ಎನ್ಎಸ್ಎಸ ಶಿಬಿರದಿಂದ ವಿದ್ಯಾರ್ಥಿಗಳ ಬದುಕಿಗೆ ಹೊಸ ದಾರಿಯನ್ನು ತೋರಿಸಲಿದೆ.
- ಡಾ. ಅರಕೆರೆ ವೆಂಕಟೇಶ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಯನಗರದ
ಬಾಕ್ಸ್:1
ವ್ಯಕ್ತಿತ್ವ ವಿಕಸನ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಕಳಕಳಿಯ ಪ್ರತಿಯೊಂದು ಹಳ್ಳಿ/ ಸ್ಥಳೀಯ ಸಮುದಾಯದ ಜೊತೆಗಿನ ಒಡನಾಟ, ಮಾರ್ಗದರ್ಶನದ ಮೂಲಕ ಈ ಶಿಬಿರವು ಕೇವಲ ಏಳು ದಿನಗಳ ಕಾಲದವರೆಗೂ ನಡೆಯಲಿದೆ.
ಬಾಕ್ಸ್:2
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಮಾಜ ಸೇವೆಯ ಬೀಜ ಬಿತ್ತುವ ಮೂಲಕ ನವ ಭಾರತದ ನಿರ್ಮಾಣಕ್ಕೆ ಎನ್ಎಸ್ಎಸ್ ಶಿಬಿರಗಳು ಉಪಯುಕ್ತವಾಗಲಿದೆ.


.gif)

.gif)


0 Comments