*"ಬಸವಾದಿ ಶರಣರು" ಫಲಿತಾಂಶ ಪ್ರಕಟಣೆ*

 *"ಬಸವಾದಿ ಶರಣರು" ಫಲಿತಾಂಶ ಪ್ರಕಟಣೆ*



ಧಾರವಾಡದ ಗಣಕರಂಗ ಸಂಸ್ಥೆಯು  893 ನೇಯ ಬಸವ ಜಯಂತಿಯ  ಆಚರಣೆಯ ಪ್ರಯುಕ್ತ ತುಮಕೂರಿನ  ವಚನ  ಸಾಹಿತ್ಯ ಮಂದಾರ ಫೌಂಡೇಶನ್  ಸಹಕಾರದೊಂದಿಗೆ ಇತ್ತೀಚಿಗೆ ಆಯೋಜಿಸಿದ್ದ  ಬಸವಾದಿ ಶರಣರು ಲೇಖನ  ಸ್ಪರ್ಧೆಯ ಫಲಿತಾಂಶವು ಇದೇ  ಮೇ 1 ರಂದು ಪ್ರಕಟಣೆಯಾಗಿದೆ. ಈ ಸ್ಪರ್ಧೆಯನ್ನು  ಸಾಹಿತಿಗಳು ಹಾಗೂ ಸಂಘಟಕರಾದ ಗಣಪತಿ ಗೋ ಚಲವಾದಿಯವರು  ಸಂಯೋಜಿಸಿದ್ದೂ, ಡಾ.ವಿಜಯಕುಮಾರ್ ಕಮ್ಮಾರವರು ತೀರ್ಪುಗಾರರಾಗಿದ್ದರೆಂದು ಹಾಗೂ ಎಸ್ ಎಸ್ ಪಾಟೀಲ್ ಬಹುಮಾನಗಳ ದಾನಿಗಳಾಗಿದ್ದರೆಂದು ಗಣಕ ರಂಗ ಸಂಸ್ಥೆಯ ಮುಖ್ಯಸ್ಥರಾದ ಸಿದ್ದರಾಮ ಹಿಪ್ಪರಗಿಯವರು  ಮಾಹಿತಿ ನೀಡಿದ್ದಾರೆ. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸುನೀತಾ ಮೂರಶಿಳ್ಳಿ, ಹಾಲೇಶ್ ಆರ್ ನಾಯಕ (ಸಮಾನ ಹಂಚಿಕೆ) ದ್ವಿತೀಯ ಬಹುಮಾನ ಅನುಪಮ ಗಿರೀಶ್ ಪಾಟೀಲ್,ಬ್ಯಾಡನೂರು ಚನ್ನಬಸವಣ್ಣ ಪಾವಗಡ ಹಾಗೂ ದೀಪಾ ಪಾಟೀಲ್ (ಸಮಾನ ಹಂಚಿಕೆ), ತೃತೀಯ ಬಹುಮಾನ ಡಾ. ರಾಜಶೇಖರ್ ಬಿರಾದಾರ,  ಡಾ. ಸಂದ್ಯಾ ಎಚ್ ಎಸ್ ಅವರೂ ಹಾಗೂ ಮೆಚ್ಚುಗೆ ಬಹುಮಾನಗಳನ್ನೂ  ಅರುಣಾ ಗುಜ್ಜರಿ, ಭಾಗ್ಯಶ್ರೀ ಸಂ. ಕೋಟಿ,  ಭಾರತಿ  ಬಡಿಗೇರ, ಗೀತಾ ಪಾಟೀಲ್  ಹಾಗೂ ಜೋಸೆಫ್ ಯೇ ಮಲ್ಲಾಡಿ ಪಡೆದುಕೊಂಡಿದ್ದಾರೆ.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments