*ಪತ್ರಕರ್ತರ ಲೇಖನಿಯಲ್ಲಿ ಬೆಂಕಿಯು ಇರುತ್ತದೆ, ಬೆಳಕೂ ಇರುತ್ತದೆ:*
*ಪ್ರೊ ಟಿ ಎಸ್ ವಂಟಗೂಡಿ*
ರಾಯಬಾಗ: ಪತ್ರಿಕಾ ರಂಗ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಲೋಕಾಯುಕ್ತ ಸಂಸ್ಥೆ ಇದ್ದಂತೆ, ಪತ್ರಕರ್ತರು ಅನಧಿಕೃತ ಲೋಕಾಯುಕ್ತರಿದ್ದಂತೆ, ಪತ್ರಕರ್ತರ ಲೇಖನಿಯಲ್ಲಿಯಲ್ಲಿ ಬೆಂಕಿಯೂ ಇರುತ್ತದೆ ಬೆಳಕೂ ಇರುತ್ತದೆ ಎಂದು ಪ್ರಾಚಾರ್ಯ ಪ್ರೊ ಟಿ ಎಸ್ ವಂಟಗೂಡಿ ಹೇಳಿದರು.
ತಾಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿ ಸಿದ್ದೇಶ್ವರ ನಿಲಯದ ಆವರಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ತಾಲೂಕು ಘಟಕ ರಾಯಭಾಗ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ರಾಯಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಿಕೆಗಳು ಅರೋಗ್ಯಕರ ಹಾಗೂ ಶುದ್ಧ ಸಮಾಜ ಕಟ್ಟುವ ಕಾರ್ಯ ಮಾಡುತ್ತವೆ ಎಂದರು.
ಇದಕ್ಕೂ ಮುನ್ನ ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಅಮಿತ ಪೂಜೇರಿ, ಹಾಲಸಿದ್ದ ವಂಟಗೂಡಿ, ಜಡಿಸಿದ್ದ ವಂಟಗೂಡಿ,ರಾಮು ವಂಟಗೂಡಿ, ವಿವೇಕ ವಂಟಗೂಡಿ, ಹಾಗೂ ಅಶೋಕ ಪೂಜೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು ಭಾಗ್ಯಶ್ರೀ ಪೂಜಾರಿ ಸ್ವಾಗತಿಸಿ ನಿರೂಪಿಸಿದರು. ಲಕ್ಷ್ಮೀ ಪೂಜಾರಿ ವಂದಿಸಿದರು.
ವರದಿ:ಡಾ. ಜಯವೀರ ಎ. ಕೆ
ಖೇಮಲಾಪುರ

.gif)

.gif)


0 Comments