*ಗೌತಮ ಬುದ್ಧ*

 *ಗೌತಮ ಬುದ್ಧ*


ಮಾತೆ ಮಾಯಾದೇವಿ

ಶುದ್ಧೋದನರ ಸುಪುತ್ರ ಶುದ್ಧ ಸಿದ್ಧಾರ್ಥ ಬುದ್ಧ

ರಾಜಕುಮಾರನೀತ ಸತ್ಯ ಶೋಧಿಸಲು ಸಂಸಾರ ಸುಖ ತೊರೆದ

ಕಷ್ಟ ನೋವು ನಷ್ಟ ದುಃಖಕ್ಕೆ ಕಾರಣ ಹುಡುಕಲು ಅಡವಿಗೆ ತೆರಳಿದ

ಅರಮನೆ ಅನ್ನ ಆಹಾರ ತೊರೆದು ಘೋರ ತಪಸ್ಸು ಗೈದ ಪರಿಶುದ್ಧಬುದ್ಧ!


ಬೋಧಿ ವೃಕ್ಷದ ಕೆಳಗೆ ಮನ ಧ್ಯಾನದೊಳಗಿರಲು ಸತ್ಯದ ಸುಜ್ಞಾನ ಪಡೆದ

ಅತಿ ಆಸೆಯೇ ದುಃಖಕ್ಕೆ ಮೂಲ ಕಾರಣ ಅರಿವಿನ ಶೋಧ

ಅಜ್ಞಾನ ಅಸಮಾನತೆ ಕ್ರೌರ್ಯ  ಮೌಢ್ಯದ ವಿರುದ್ಧ ಎದ್ದು ನಿಂತ ಪ್ರಬುದ್ಧ

ಸತ್ಯ ಶಾಂತಿ ಪ್ರೀತಿ ಅಹಿಂಸೆ ಅರ್ಥ ತಿಳಿಸಿ ಜಗವನ್ನೇ ಗೆದ್ದ ಬುದ್ಧ!


ಮಹಾಜ್ಞಾನಿ ಮಹಾನ್ ಪರಿತ್ಯಾಗಿ ಪರಿಶುದ್ಧ ಗೌತಮ ಬುದ್ಧ

ಕ್ರೂರಿ ಅಂಗುಲಿಮಾಲನ ಮನ ಪರಿವರ್ತನೆಗೆ ಕಾರಣನಾದ

ಯುದ್ದದಾಹಿ ಸಾಮ್ರಾಟ ಅಶೋಕ ಚಕ್ರವರ್ತಿಯ ಮನ ತಿದ್ದಿದ

ಮಾನವ ಕುಲಕ್ಕೆ ಬೇಕಾಗಿ ಬೆಳಕಾಗಿ ವಿಶ್ವಕ್ಕೆ ಪ್ರಸಿದ್ಧ ಗೌತಮಬುದ್ಧ!


ಸರಳ ಶಾಂತ ಸೌಮ್ಯ ಕಾರುಣ್ಯಮೂರ್ತಿ ಸಿದ್ದಿ ಪುರುಷ ಸಿದ್ದಾರ್ಥ ಬುದ್ಧ

ಬೌದ್ಧ ಧರ್ಮದ ಉದಯ ಜಗಜ್ಯೋತಿಯಾದ ಗೌತಮ ಬುದ್ಧ

ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಅಂಬೇಡ್ಕರರ ಜ್ಞಾನಕ್ಕೆ ಒಲಿದು ಆಸರೆಯಾದ

ಬುದ್ಧಂ ಶರಣಂ ಗಚ್ಛಾಮಿ ಮೌನ ಧ್ಯಾನ ಜ್ಞಾನ ನಮೋ ಬುದ್ಧ!

🐤 ಮಾರುತೇಶ್ ಮೆದಿಕಿನಾಳ

Image Description

Post a Comment

0 Comments