*ಶ್ರೀ ಸಿದ್ದರತ್ನ ಮದಗೊಂಡೇಶ್ವರ ಸದ್ಭಾವನ ಪ್ರಶಸ್ತಿಗೆ ಭಾಜನರಾದ* *ಪ್ರೊ ವಂಟಗೂಡಿ ಹಾಗೂ ಶ್ರೀ ಬಿ ಎಲ್ ಘಂಟಿ*

 *ಶ್ರೀ ಸಿದ್ದರತ್ನ ಮದಗೊಂಡೇಶ್ವರ ಸದ್ಭಾವನ ಪ್ರಶಸ್ತಿಗೆ ಭಾಜನರಾದ*

*ಪ್ರೊ ವಂಟಗೂಡಿ ಹಾಗೂ ಶ್ರೀ ಬಿ  ಎಲ್ ಘಂಟಿ* 



ರಾಯಬಾಗ: ತಾಲೂಕಿನ     ಹಿಡಕಲ್ ಗ್ರಾಮದ ಪ್ರಾಚಾರ್ಯರು,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರು, ಹಾಗೂ ಜನಾನುರಾಗಿ ವಾಗ್ಮಿಗಳಾದ ಪ್ರೊ ಟಿ ಎಸ್ ವಂಟಗೂಡಿ ಹಾಗೂ ಖ್ಯಾತ ಜಾನಪದ ಕಲಾವಿದರು, ಸ್ಥಳೀಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಜನಪ್ರಿಯ ನಿರೂಪಕರಾದ ಶ್ರೀ ಬಿ ಎಲ್ ಘಂಟಿ ಅವರು ಪ್ರಸಕ್ತ ಸಾಲಿನ ಶ್ರೀ ಸಿದ್ದರತ್ನ ಮದಗೊಂಡೇಶ್ವರ ಸದ್ಭಾವನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.


   ಪಕ್ಕದ ಕಾಗವಾಡ ತಾಲೂಕಿನ ಸುಕ್ಷೇತ್ರ ಕವಲಗುಡ್ಡದಲ್ಲಿ ಸೋಮವಾರ ದಿ 4 ರಿಂದ ರವಿವಾರ ದಿ 10 ರ ವರೆಗೆ ನಡೆಯುವ ಗಾನಗಾರುಡಿಗ ಕವಿಮುನಿ ತಿಲಕ ಶ್ರೀ ಸಿದ್ದರತ್ನ ಮದಗೊಂಡೇಶ್ವರ ಪೂಜ್ಯರ 16 ನೇ ಗುರು ಸ್ಮರಣೋತ್ಸವದಲ್ಲಿ  ಈ ಉಭಯ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಸಿದ್ದಾಶ್ರಮದ ಪೂಜ್ಯ ಶ್ರೀ ಅಮರೇಶ್ವರ ಮಹಾರಾಜರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನಪದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕನ್ನಡ ಪ್ರಾಧ್ಯಾಪಕರು, ಹಿರಿಯ ವಾಗ್ಮಿ ಪ್ರೊ ವಂಟಗೂಡಿ ಹಾಗೂ ಜನಪದ ಕಲೆಯ ಮೂಲಕ ಜನಮನ ಗೆದ್ದ ಜನಾನುರಾಗಿ ನಿರೂಪಕರು ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಿ ಎಲ್ ಘಂಟಿ ಅವರು 

ಸಾಹಿತ್ಯ, ಶಿಕ್ಷಣ ಮತ್ತು ಜನಪದ ಕಲೆಯ ಮೂಲಕ ಸಮಾಜದಲ್ಲಿ ಮೌಲ್ಯಗಳ ಬೆಳವಣಿಗೆಗೆ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರ ಸೇವೆಯೂ ಸಮಾಜಮುಖಿ ಚಿಂತನೆಗೆ ದಾರಿದೀಪವಾಗಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ರವಿವಾರ ದಿ. 10 ರಂದು ನಡೆಯುವ 

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರಮ ಪೂಜ್ಯ ಶ್ರೀ ಸೋಮಲಿಂಗೇಶ್ವರ ಪಟ್ಟದ ದೇವರು, ಪರಮ ಪೂಜ್ಯ ಶ್ರೀ ಅಭಿನವ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ಅನೇಕ ಗಣ್ಯರ ಉಪಸ್ಥಿತಿಯಲ್ಲಿ  ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಲಿದೆ.


 ವರದಿ: ಡಾ ಜಯವೀರ  ಎ. ಕೆ.

      ಖೇಮಲಾಪುರ

Image Description

Post a Comment

0 Comments