ನಾ ಕಂಡ ಕನ್ನಡ ಮೌಲ್ವಿ ಕೃತಿಯ ಲೋಕಾರ್ಪಣೆ
ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ಸಾಹಿತಿಯಾದ ಡಾ. ಮಾಸ್ತಿ ಬಾಬು ಅವರು ಹುಬ್ಬಳ್ಳಿಯ ಹೆಸರಾಂತ ಚಿಂತಕ, ಸಾಹಿತಿ, ಸಮಾಜ ಸೇವಕರಾದ ಶ್ರೀಯುತ ನವೀದ್ ಮುಲ್ಲಾರವರ ಬಗ್ಗೆ ಮಾಸ್ತಿ ಪ್ರಕಾಶನದ ವತಿಯಿಂದ ಬರೆದಿರುವ "ನಾ ಕಂಡ ಕನ್ನಡ ಮೌಲ್ವಿ" ವುಕ್ತಿ ಚಿತ್ರಣ ಅಭಿನಂದನಾ ಗ್ರಂಥವನ್ನು ೦೩-೦೫-೨೦೨೬ರಂದು ಬೆಂಗಳೂರಿನ ರಾಯಲ್ ಹೋಟೆಲ್ನಲ್ಲಿ ಸಾಹಿತಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀಯುತ ನವೀದ್ ಮುಲ್ಲಾ, ಶ್ರೀಯುತ ಖಾಜಾ ಹುಸೇನ್, ಶ್ರೀಯುತ ನಾರಾಯಣಸ್ವಾಮಿ ಬಿ.ಎಂ ಮತ್ತು ಶ್ರೀಧರ ಲೋಹಾರರವರು ಭಾಗವಹಿಸಿದ್ದರು. ಮಾನವ ಕುಲಂ ತಾನೊಂದೇ ವಲಂ ಎಂಬಂತೆ ಜಾತಿ, ಧರ್ಮ, ಬೇಧ-ಭಾವವನ್ನು ತೊರೆದು ಸಾಮರಸ್ಯದಿಂದ ಬಾಳ್ವೆ ನಡೆಸಿದರೆ ಜೀವನ ಸುಖಮಯವಾಗಿರುತ್ತದೆ ಎಂಬುದನ್ನು ಲೇಖಕರಾದ ಡಾ. ಮಾಸ್ತಿ ಬಾಬು ಮನವರಿಕೆ ಮಾಡಿಕೊಟ್ಟರು. ಮುಸಲ್ನಾನರಾಗಿ ಹುಟ್ಟಿ ಕನ್ನಡ ತಾಯಿ ಭುವನೇಶ್ವರಿಯನ್ನು ಒಲಿಸಿಕೊಂಡು ಕನ್ನಡ ಸಾಹಿತ್ಯಲೋಕದಲ್ಲಿ ದಿಗ್ಗಜರಾಗಿ ಹೆಸರು ಮಾಡಿರುವ ನವೀದ್ ಮುಲ್ಲಾರವರ ಬಗ್ಗೆ ಈ ಅಭಿನಂದನಾ ಗ್ರಂಥವನ್ನು ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದ ಮಾಸ್ತಿ ಪ್ರಕಾಶನ ತಂಡಕ್ಕೆ ಕೃತಜ್ಞತೆಯನ್ನು ತಿಳಿಸಲಾಯಿತು. ನವೀದ್ ಮುಲ್ಲಾರವರು ಲೇಖಕರಾದ ಡಾ. ಮಾಸ್ತಿ ಬಾಬು ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಿ ಗೌರವವನ್ನು ಸಲ್ಲಿಸಿದರು.
ವರದಿ :ಡಾ. ವಿಲಾಸ್ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments