*ಬಹುಮುಖ ಪ್ರತಿಭೆಯ ಶಿಕ್ಷಕ ಬಿ ಎಲ್ ಘಂಟಿ ಅವರಿಗೆ ಗೌರವ ಸಮ್ಮಾನ*

 *ಬಹುಮುಖ ಪ್ರತಿಭೆಯ  ಶಿಕ್ಷಕ ಬಿ ಎಲ್ ಘಂಟಿ ಅವರಿಗೆ ಗೌರವ ಸಮ್ಮಾನ*



ರಾಯಬಾಗ: ತಾಲೂಕಿನ ಹಿಡಕಲ್ ಗ್ರಾಮದ ಆದರ್ಶ ಶಿಕ್ಷಕರು, ಜಾನಪದ ಕಲಾವಿದರು, ಜನಾನುರಾಗಿ ನಿರೂಪಕರಾಗಿ  ಜನಮನಸೂರೆಗೊಂಡ ಶ್ರೀ ಬಿ ಎಲ್ ಘಂಟಿ ಅವರು ಇತ್ತೀಚಿಗೆ ನಡೆದ ಸಹ ಶಿಕ್ಷಕರ ಬಡ್ತಿ ಪ್ರಕ್ರಿಯೆಯಲ್ಲಿ ಪದೋನ್ನತಿ ಪಡೆದು ಸ್ವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಗೆ ಪ್ರಧಾನ ಗುರುಗಳಾಗಿ ಪದಗ್ರಹಣ ಮಾಡಿದ ಪ್ರಯುಕ್ತ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಶುಕ್ರವಾರ ದಿ. 1 ರಂದು ನಡೆದ ಸತ್ಕಾರ ಸಮಾರಂಭದಲ್ಲಿ ಸ್ನೇಹಿತರ ಅಭಿಮಾನ ಬಳಗದ ಪರವಾಗಿ ಅವರಿಗೆ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಅಭಿಮಾನದಿಂದ ಸತ್ಕರಿಸಿ ಗೌರವಿಸಿದರು.

 ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಪ್ರೊ ಟಿ ಎಸ್ ವಂಟಗೂಡಿ ಅವರು ಸತ್ಕರಿಸಿ ಮಾತನಾಡಿ, ಕ್ರಿಯಾಶೀಲತೆಗೆ ಮತ್ತೊಂದು ಹೆಸರು ಬಿ ಎಲ್ ಘಂಟಿ, ಆದರ್ಶ ಶಿಕ್ಷಕರಾಗಿ ಕಲಾವಿದರಾಗಿ ನಿರೂಪಕರಾಗಿ ಹೆಸರಾಂತ ವಾಗ್ಮಿಯಾಗಿ   ಈ ಭಾಗದಲ್ಲಿ ಶ್ರೀಮಂತ ಹೆಸರು ಸಂಪಾದಿಸಿದ ಅವರು ಜನ್ಮ ಗ್ರಾಮದಲ್ಲಿಯೇ ಪ್ರಧಾನ ಗುರುಗಳಾಗಿ ಪದಗ್ರಹಣ ಮಾಡಿದ ಘಂಟಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತೋನ್ನತ ಸ್ಥಾನ ಲಭಿಸಲಿ ಎಂದು ಅಭಿಮಾನದಿಂದ ಹಾರೈಸಿದರು.


  ರಾಷ್ಟ್ರೀಯ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ ಪುರಸ್ಕೃತರು,ಕನ್ನಡ ಪ್ರಾಧ್ಯಾಪಕರು, ಹಾಗೂ ಸಾಹಿತಿಗಳಾದ ಡಾ. ಜಯವೀರ     ಎ. ಕೆ.,ಸತ್ಯಪ್ರಭು ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಎಂ ಪಿ ಕಂಟಿಕಾರ, ಶಿಕ್ಷಕ ಕಾಮಂತ ಕಂಕನವಾಡಿ, ಹಾಲಪ್ಪ ಕಂಕನವಾಡಿ, ಶರಣ ಜೀವಿ ಕಲ್ಮೇಶ ಸತ್ತಿ, ಪ್ರಾಚಾರ್ಯರಾದ ಲಕ್ಷ್ಮಣ ಪಾಟೀಲ, ಹಾಲಸಿದ್ಧ ವಂಟಗೂಡಿ ಶಿಕ್ಷಕಿ ಗಾಯತ್ರಿ ಹಾಗೂ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.


ವರದಿ:ಡಾ. ಜಯವೀರ ಎ.ಕೆ 

      ಖೇಮಲಾಪುರ

Image Description

Post a Comment

0 Comments