* ಡಾ. ಜಯವೀರ ಎ. ಕೆ ಅವರ ಯೋಗ್ಯತೆಗೆ ಒಲಿದು ಬಂದ ಸರ್ವೋತ್ತಮ ಗೌರವವಾಗಿದೆ:* *ಪ್ರೊ ಟಿ ಎಸ್ ವಂಟಗೂಡಿ*

 *ಡಾ. ಜಯವೀರ ಎ. ಕೆ ಅವರ ಯೋಗ್ಯತೆಗೆ ಒಲಿದು ಬಂದ ಸರ್ವೋತ್ತಮ ಗೌರವವಾಗಿದೆ:*

*ಪ್ರೊ ಟಿ ಎಸ್ ವಂಟಗೂಡಿ*




ರಾಯಬಾಗ:ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಡಾ. ಜಯವೀರ ಎ.ಕೆ. ಅವರ ಸಾಧನೆಗೆ ಪ್ರಸ್ತುತ ಲಭಿಸಿದ ರಾಷ್ಟ್ರೀಯ ಅಂಬೇಡ್ಕರ ಸದ್ಭಾವನ ಪ್ರಶಸ್ತಿಯು ಅವರ ಯೋಗ್ಯತೆಗೆ ಸಂದ ಸರ್ವೋತ್ತಮ  ಗೌರವವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಪ್ರೊ. ಟಿ.ಎಸ್. ವಂಟಗೂಡಿ ಹೇಳಿದರು.


ತಾಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಇಂದು ಶುಕ್ರವಾರ ದಿ. 1 ರಂದು ನಡೆದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.    


 ಸಾಹಿತ್ಯ ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಡಾ. ಜಯವೀರ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಖೇಮಲಾಪುರ ಗ್ರಾಮದ ಕನ್ನಡ ಪ್ರಾಧ್ಯಾಪಕರು, ಸಾಹಿತಿಯಾಗಿರುವ ಡಾ. ಜಯವೀರ ಎ.ಕೆ. ಅವರಿಗೆ ಕಲಬುರ್ಗಿಯ ಕನ್ನಡ ನುಡಿಮುತ್ತು ವೇದಿಕೆ ನೀಡುತ್ತಿರುವ ಪ್ರಸಕ್ತ ಸಾಲಿನ ರಾಷ್ಟ್ರೀಯ ಅಂಬೇಡ್ಕರ ಸದ್ಭಾವನ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಸಂಯುಕ್ತವಾಗಿ ಈ ಸತ್ಕಾರ ಸಮಾರಂಭವನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿಗ್ರಾಮದ ವಿವಿಧ ಗಣ್ಯರು ಭಾಗವಹಿಸಿ, ಡಾ. ಜಯವೀರ ಎ.ಕೆ. ಅವರ ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳ ಸೇವೆಯನ್ನು ಮುಕ್ತವಾಗಿ ಕೊಂಡಾಡಿದರು.


ಸತ್ಯಪ್ರಭು ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಎಂ ಪಿ ಕಂಟಿಕಾರ, ಜಾನಪದ ಕಲಾವಿದ ಹಾಗೂ ಮುಖ್ಯೋಪಾಧ್ಯರಾದ ಬಿ ಎಲ್ ಘಂಟಿ, ಶಿಕ್ಷಕ ಕಾಮಂತ ಕಂಕನವಾಡಿ, ಶರಣ ಜೀವಿ ಕಲ್ಮೇಶ ಸತ್ತಿ, ಹಾಲಪ್ಪ ಕಂಕನವಾಡಿ, ಪ್ರಾಚಾರ್ಯರಾದ ಲಕ್ಷ್ಮಣ ಪಾಟೀಲ, ಹಾಗೂ ಶಿಕ್ಷಕಿ ಗಾಯತ್ರಿ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.


ವರದಿ:ಡಾ. ವಿಲಾಸ ಕಾಂಬಳೆ

Image Description

Post a Comment

0 Comments