🍁ಕವನ🍁 ಮತ್ತೊಮ್ಮೆ ಹುಟ್ಟಿ ಬಾ

 🍁ಕವನ🍁

ಮತ್ತೊಮ್ಮೆ ಹುಟ್ಟಿ ಬಾ



ಅವ   ನಮ್ಮ ಜಾತಿಯವನೆಂದ ಒಬ್ಬ

   ಇವ ನಮ್ಮ ಜಾತಿಯವನೆಂದ ಇನ್ನೊಬ್ಬ 

 ನನ್ನ ದ್ಯಾವ ಜಾತಿ ಹುಡುಕುತ್ತಿದ್ದೇನೆ ಬಸವಣ್ಣ ನಾ ನಿಂದು


ಇವನಾರವ 

ಇವನಾರವ ಎಂದೆನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎಂದು ಕಲಿಸಿದೆ ಬಸವಣ್ಣ ನೀನಂದು  ಜಾತಿ ಧರ್ಮದ ಲೆಬಲ್ ಅಂಟಿಸಿ ನರಳುತ್ತ ಅಟ್ಟಹಾಸ ಗಯ್ಯುವವರ ಕಂಡು ಗಾಬರಿಯಲ್ಲಿ ನಿಂತಿಹೆ ಬಸವಣ್ಣ ನಾನಿಂದು


ಜಾತಿ ಮತವ ದೂರವಿರಿಸಿ ಕಾಯಕವೇ ಕೈಲಾಸ ಎಂದು ಕಲಿಸಿದೆ ಬಸವಣ್ಣ ನೀನಂದು      

 ಜಾತಿ ಮತಕ್ಕಾಗಿ ಹೊಡೆದಾಡಿ ಅನುದಿನ ದ್ವೇಷದ ಬೆಂಕಿಯಲ್ಲಿ ಸುಟ್ಟು ಬೂದಿಯಾಗುವವರನ್ನು ಕಂಡು ಜಾತಿ ಮಾಡಿದವನನ್ನು ಹುಡುಕುತ್ತಿದ್ದೇನೆ ಬಸವಣ್ಣ ನಾನಿಂದು


ಕಾಯಕವೇ ಜಾತಿ ಆಗಬೇಕು ಮಾನವೀಯತೆಯೇ ಜಾತಿ ಆಗಬೇಕು, ಮನುಷ್ಯತ್ವವೇ ಜಾತಿ ಆಗಬೇಕು ಎಂದು ಬಯಸಿದೆ ಬಸವಣ್ಣ ನೀನಂದು,   

 ಮಾನವೀಯತೆ ಮನುಷ್ಯತ್ವವ ಮರೆತವರ ಹುಡುಕುತ್ತಿದ್ದೇನೆ ಜಾತಿ ಭೂತವ ಹೊಕ್ಕಿಕೊಂಡವರ ಮುಖದಲ್ಲಿ ಬಸವಣ್ಣ ನಾನಿಂದು


ಬಸವಣ್ಣ ಮತ್ತೊಮ್ಮೆ ಹುಟ್ಟಿ ಬಾ 

ಜಾತಿಯ ಭೂತವ ಕಿತ್ತೊಗೆದು ಮತ್ತೊಮ್ಮೆ ವಿಶ್ವಮಾನವತೆಯ ಸಂದೇಶ ಸಾರು ಬಾ...

 ಬಸವಣ್ಣ ಮತ್ತೆ ಹುಟ್ಟಿ ಬಾ ಕಾಯಕವೇ ಕೈಲಾಸ ಎಂದು ಕಲಿಸು ಬಾ 



-ರಜನಿ ಅಶೋಕ ಜೀರಗ್ಯಾಳ

Image Description

Post a Comment

0 Comments