💐ಬಸವ ಜಯಂತಿ ಶುಭಾಶಯಗಳು 💐
II ಸಮಾನತೆಯ ಸಾರ II
ಇವನಾರವ ಅವನಾರವ ಎಂದೆನಿಸದಿರಯ್ಯ
ಇವ ನಮ್ಮವ ಅವ ನಮ್ಮವ ಎಂದೆನಿಸಯ್ಯ
ಜಾತಿಮತದ ಭೇದವನು ಅಳಿಸಿ ಬಿಡಯ್ಯ
ಮಾನವೀಯತೆಯ ದೀಪವನು ಹಚ್ಚಿ ನೋಡಯ್ಯ ||
ಕಾಯಕವೇ ಕೈಲಾಸವೆಂದು ಸಾರಿದ ಗುರುವು
ದಾಸೋಹದ ಅಮೃತಸುಧೆ ನೀಡಿದ ಕಾಯವು
ಅಸಮಾನತೆಯ ಕತ್ತಲೆಯ ಕಳೆದ ಹರಿವು
ಅರಿವಿನ ಬೆಳಗಿನೊಳ್ಮೂಡಲಿ ಹೊಸ ಅರಿವು ||
ಮೇಲು ಕೀಳೆಂಬ ಗೋಡೆಯನು ಉರುಳಿಸಿ
ಒಂದೇ ಮಣ್ಣಿನ ಮಕ್ಕಳೆಂದು ಭಾವಿಸಿ
ಪ್ರೀತಿ ಅಕ್ಕರೆಯ ಸುಧೆಯನು ಉಣಿಸಿ
ಬಸವಪಥದಿ ನಡೆಯುವ ಲೋಕಹಿತ ಬಯಸಿ ||
ಅನುಭವ ಮಂಟಪದಲಿ ಬೆಳಗಿದ ಜ್ಞಾನ
ವಚನ ಸಾಹಿತ್ಯದೊಳು ಅಡಗಿದೆ ಅಮೃತಪಾನ
ಎಲ್ಲರಿಗೂ ನೀಡೋಣ ಸಮಾನತೆಯ ಮಾನ
ಇದಲ್ಲವೇ ನಮ್ಮನಾಡ ದೊಡ್ಡ ಸನ್ಮಾನ ||
✍️ ವಿಜಯ ಲಕ್ಷ್ಮಿ ನಾಡಿಗ ಮಂಜುನಾಥ್ ಕಡೂರು

.gif)

.gif)


0 Comments