*ಹರಿಸ್ತುತಿ*

 *ಹರಿಸ್ತುತಿ*



ಹರಿಯೆ ನಮಿಸುವೆ ನಿನ್ನ ಚರಣಕೆ

ಧರೆಯ ಬೇಗುದಿ ಕುಗ್ಗಿಸು|

ಪರಿ ಪರಿಯ ದಳ್ಳುರಿಗೆ ಸಿಲುಕಿದ

ಜನರ ಬವಣೆಯ ನೀಗಿಸು||೧||


ಜಗದ ಸರ್ವವು ನಿನ್ನ ಆಣತಿ

ಯಂತೆ ಸಾಗುತಲಿರುವುದು|

ಹಗಲು ರಾತ್ರಿಗಳೆಲ್ಲವೂ ನೀ

ನೆಣಿಸಿದಂತೆಯೆ ನಡೆವುದು||೨||


ಕಡಲಕುವರಿಯ ಪತಿಯೆ ದಿನವೂ

ಬೆಳಗು ಬೈಗುಗಳೆನ್ನದೇ|

ಪಿಡಿದು ಛಲದಲಿ ಅರ್ಪಿಸುವೆ ನಾ

ನನ್ನದೆಲ್ಲವು ನಿನ್ನದೇ||೩||


ನಿನ್ನ ನಾಮಾಮೃತವ ನೆನೆದರೆ

ಭವದ ಬಾಧೆಗಳಳಿವುವು|

ಬನ್ನವೆಲ್ಲವು ಕುಗ್ಗಿ ಮನುಜನ

ಬದುಕು ಸಂತಸಗೊಳುವುವು||೪||


*ಕಿಗ್ಗಾಲು ಎಸ್ ಗಿರೀಶ್*

೨೦-೦೪-೨೦೨೬

Image Description

Post a Comment

0 Comments