🌳ಮರವೆಂಬ ವರ🌴

 🌳ಮರವೆಂಬ ವರ🌴



ನಾನು ಭೂಮಿ ಮೇಲಿನ ಮರ 

ಪ್ರಕೃತಿ ಭೂಮಿಗೆ ಕೊಟ್ಟ ವರ 

ನನ್ನ ಬೆಳೆಸಿದರೆ ನೀನಾಗುವೆ ಅಮರ

ಹೆಸರಿಗೆ ಉಸಿರಿಗೆ ನಾನೇ ಆಧಾರ II


ನನ್ನ ಬೀಜ ಭೂಮಿಗೆ ಬೀಳಲಿ

ಮಣ್ಣು ನೀರು ಬೀಜ ಬೆರೆಯಲಿ

ನಾನು ಮಣ್ಣಿಂದ ಮೊಳಕೆಯೊಡೆಯುವೆ

ನಾನು ಭೂಮಿಗೆ ಆಳವಾಗಿ ಬೇರು ಬಿಡುವೆ II


ನನ್ನ ಹಸಿರಿಗೆ ಭೂಮಿ ತಂಪಾಗುವುದು

ನನ್ನ ರಂಬೆ ಕೊಂಬೆಗಳ ಮೇಲೆ ಹಕ್ಕಿ ಪಕ್ಷೆ ಕೂರುವುದು 1 

ತನುವೆಲ್ಲ ಹೂಬಿಟ್ಬಿರಲು

ಜೀವ ಸಂಕುಲಕ್ಕೆ ಫಲ ಕೊಡುತಿರಲು II


ಎಲೆಗಳ ಸಮೂಹದಿಂದ ಇಳೆಗೆ ಮಳೆ ತರುವೆ ಬೇರಿನಿಂದ ಭೂಮಿಗೆ ಮಳೆ ನೀರು ಇಂಗಿಸುವೆ | 

ಬೇಸಿಗೆ ಬಿಸಿಲಲ್ಲಿ ತಂಪು ಕೊಡುವೆ

ಜಗದೆಲ್ಲಾ ಹಕ್ಕಿಪಕ್ಷಿಗಳಿಗೆ ನೆಲೆಯಾಗುವೆ II


ನಾ ಬೆಳೆದಂತೆ ಮಾನವ ನೀ ಬೆಳೆವೆ

ನನ್ನ ಬೆಳೆಸು ನಿನ್ನ ಹೆಸರ ಉಳಿಸುವೆ

ನೀ ಎಲ್ಲೇ ಇರು, ನಾ ಎಲ್ಲೆಲ್ಲೂ ಇರುವೆ

ನಾ ಅಳಿದರು ನಿನಗೆ ವರವಾಗುವೆ II


✍️ಜೆಕೆ ಬಸವರಾಜು ಜಯಪುರ🌱

Image Description

Post a Comment

0 Comments