*ಪ್ರೇಮ ಕವಿ ಪ್ರೊ ಶಿವಾನಂದ ಬೆಳಕೂಡ ಅವರಿಗೆ ಗೌರವ ಸಮ್ಮಾನ*
ಮೂಡಲಗಿ:ಮೂಡಲಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜ್ಞಾನದೀಪ ಸಾಹಿತ್ಯ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದ 49ನೇ ಸಂಚಿಕೆಯ ಜಿಲ್ಲಾ ಮಟ್ಟದ ಕಾವ್ಯ ಕಮ್ಮಟ ಕಳೆದ ದಿ. 5 ರಂದು ರವಿವಾರ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾವ್ಯ ಕಮ್ಮಟದ ಅಧ್ಯಕ್ಷತೆ ವಹಿಸಿದ್ದ ಬಾಗೆನಾಡಿನ ಪ್ರೇಮಕವಿ ಪ್ರೊ ಶಿವಾನಂದ ಬೆಳಕೂಡ ಅವರನ್ನು ಗಣ್ಯರು ಸತ್ಕರಿಸಿ ಗೌರವಿಸಿದರು.
ಮೂಡಲಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಂಜಯ ಶಿಂದಿಹಟ್ಟಿ,ಶಿಕ್ಷಕ ವೈ ಬಿ ಪಾಟೀಲ,ಪ್ರೊ ಬಿ ಸಿ ಹೆಬ್ಬಾಳ, ವಿಶ್ರಾಂತ ಪ್ರಾಧ್ಯಾಪಕಿ, ಸಾಹಿತಿ ಡಾ. ಗುರುದೇವಿ ಹುಲ್ಲೆಪ್ಪನವರಮಠ, ಸಂದ್ಯಾ ಪಾಟೀಲ, ಶಶಿರೇಖಾ ಬೆಳ್ಳಂಕಿ, ಶೈಲಜಾ ಬಡಿಗೇರ, ಕವಿಗಳಾದ ಸಾಗರ ಝ0ಡೆನ್ನವರ, ಪ್ರೊ ಶ್ರೀಕಾಂತಗೌಡ ಪಾಟೀಲ, ಆರಕ್ಷಕ ಕವಿ ಪ್ರೇರಣಾ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಂಗಮೇಶ ನಾಯಿಕ, ಶ್ರೀಶೈಲ ಶಿರೂರ,ಹಾಗೂ ತ್ಯಾಗರಾಜ ಕದಂ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವರದಿ: ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments