"ಹನಿಗವನ"
"ವರ"
ಎಷ್ಟೇ ಜಪ ತಪ ಮಾಡಿಯೂ
ಪ್ರತ್ಯಕ್ಷ ಮಾಡಲಾಗದು ದೇವರ;
ಆ ದೇವರಿಗೂ ಗೊತ್ತು ಇದು ಕಲಿಗಾಲ
ಮನುಷ್ಯ ನನ್ನನ್ನೂ ಮರೆತುಬಿಡುತ್ತಾನೆ
ಕೊಟ್ಟ ಮೇಲೆ ವರ!
____
"ಹನಿಗವನ"
ಕೆಲವೇ ಕೆಲವು ಸಾಲುಗಳಿದ್ದರೂ
ಪ್ರತೀ ಪದಗಳಲ್ಲೂ ತುಂಬಿಹುದು ಜೀವನದ ಸಾರ
ಒಮ್ಮೊಮ್ಮೆ ಹೊಗಳಿಕೆಯ ಹಾರ
ಕೆಲವೊಮ್ಮೆ ಮಾತಿನ ಕಟು ಪ್ರಹಾರ
ಈ ಹನಿಗವನಗಳೆಂದೂ
ಒಂಥರಾ ಸಿಹಿ ಸಿಹಿ ಖಾರ ಖಾರ!
ಆರ್. ಸುನೀಲ್, ತರೀಕೆರೆ.

.gif)

.gif)


0 Comments