*ಗಝಲ್*

 *ಗಝಲ್*



ಗೆಳತಿ ನನ್ನ ಮನದ ತುಂಬ ನಿನ್ನ ರೂಪ

ತುಂಬಿದೆ

ಕನಸಲೂ ಮೈಮನಸ್ಸೆಲ್ಲಾ ನಿನ್ನೆಡೆಗೆ

ಚಲಿಸಿದೆ


ನೀ ನನ್ನವಳೆಂದು ಹೇಳುತ್ತಿದೆ ನನ್ನೆದೆಯ

ಬಡಿತವು

ಹೃದಯದ ಹೆಬ್ಬಾಗಿಲು ಕೂಡ ನಿನಗಾಗಿ

ತೆರೆದಿದೆ


ನಿನ್ನೊಡನೆ ನಲಿವಾಗ ನನ್ನಲೇನೋ

ಹರುಷವು

ಸೆಳೆದ ಕೊಲಮಿಂಚಿನ ನೋಟದಿ ಸಲಿಗೆ

ಬೆಸೆದಿದೆ 


ಬದುಕೆಂಬ ನೌಕೆಗೆ ಜೊತೆಯಾಲೆಂದೆ

ಬಂದಿರುವೆ 

ಪ್ರತಿ ಕ್ಷಣ ಜೊತೆಗಿರುವ ಅವಕಾಶವು

ತಂತಾನೆ ಒದಗಿದೆ


ಅಶೋಕನ‌ ಕಾವ್ಯಬನದಿ ಅರಳಿದ

ಹೂವು ನೀನು

ನಿತ್ಯವೂ ಅರಳಿ ಸೂಸಿದ ಘಮವು

ನಿನ್ನತ್ತಾ ಕರೆದಿದೆ


*ಅಶೋಕ‌ ಬೇಳಂಜೆ*

Image Description

Post a Comment

0 Comments