ಚಿತ್ರ ಕವನ *ಸುಕೋಮಲೆ*

 ಚಿತ್ರ ಕವನ


*ಸುಕೋಮಲೆ* 



ಅರಳಿ ಬಿರಿದಿರುವ ವದನದಲಿ 

ಲಜ್ಜೆಯ ಕಾಂತಿ  ಹರಿಯಲು

ನನ್ನನ್ನೊಮ್ಮೆ ಕಣ್ಣಲ್ಲಿ ದಿಟ್ಟಿಸದೆ 

ಹಠವೇಕೆ ನಲ್ಲೆ  ಪೆದ್ದು ಮಗುವಂತೆ 


ತೀರದು ದಾಹ ಹುಚ್ಚು ಮನಸ್ಸಿಗೆ

ಬಿಟ್ಟು ಬಿಟದ ವಿರಹದ ನೋವು

ಅವರಿಸಿದೆ ಮನದ ತುಂಬೆಲ್ಲವು

ನಾಚಿ ನಿಂತಾಗ ನೀ ನನ್ನೆದುರು 


ಎಂದೆಂದೂ ನಾನು ನಿನ್ನವನು

ನಿನ್ನ ಬದುಕಿಗೆ ನೆರಳಾಗುವೆನು

ಅಪ್ರತಿಮ ಸುಂದರಿಯು ನೀನು

ನಿನ್ನಂದ ಸೂಕ್ಷ್ಮದಿ ಸರೆಹಿಡಿದೆನು


ನಯ ನಾಜೂಕಿನ ಸುಂದರಿಯೇ

ಸಮೃದ್ಧ ಕೇಶರಾಶಿ ಮನಸೆಳೆಯಿತಲ್ಲೇ

ಒಲವ ಶರಧಿಯಲೀ ತೇಲಿದೆನಲ್ಲೇ

ಹದಿನಾರರ ಹರೆಯ ಕಣ್ಣಕುಕ್ಕಿದೆಯಲ್ಲೇ


ಮನದೊಳಗೆ ನೂರಾರು ಆಶೆಯು

ಸುಕೋಮಲೆ ನಿನ್ನ ಕೈ ಸ್ಪರ್ಶಿಸಲು

ಅದೃಷ್ಟ ಮಾಡಿದವು ಕೈ ಬೆರಳುಗಳು

ಸಲುಗೆಯಲಿ ಕೈಗಳೆರಡು ಬೆರೆಯಲು


*ಅಶೋಕ ಬೇಳಂಜೆ*

Image Description

Post a Comment

0 Comments