ಜೈ ಭೀಮ
ಜೈ ಭೀಮ ನಮ್ಮ ಮಂತ್ರ
ಶಿಕ್ಷಣವೇ ನಮ್ಮ ಅಸ್ತ್ರ
ಯಾರಿಗೂ ಅಂಜದಿರಿ ಎದೆಗುಂದದಿರಿ
ಸಂಘಟನೆ ಹೋರಾಟದಲಿ ಒಗ್ಗಟ್ಟಾಗಿರಿ
ಭೀಮಾ ನೀ ಮುಗಿಯದ ಚರಿತೆ
ನೀನು ಜ್ಞಾನದ ಹಣತೆ .
ಕಷ್ಟ ನೋವುಗಳ ಮೆಟ್ಟಿನಿಂತೆ
ಸಂವಿಧಾನವನ್ನು ನೀ ಬರೆದುಬಿಟ್ಟೆ
ನೀ ಪಟ್ಟ ನೋವು ನಾವು ಪಡಬಾರದೆಂದೆ
ನಮಗಾಗಿ ಜೀವನ ಮುಡಿಪಾಗಿಟ್ಟೆ
ಭೀಮ ನೀ ಮುಗಿಯದ ಚರಿತೆ
ನೀನು ಜ್ಞಾನದ ಹಣತೆ.
ಮೊಂಬತ್ತಿಯಂತೆ ಕರಗಿ ಬೆಳಕು ನೀಡಿದೆ
ಹಗಲಿರುಳೆನ್ನದೆ ಬದುಕನ್ನು ಪರರಿಗಾಗಿ ಸವೆಸಿದೆ
ನಿಮ್ಮಷ್ಟು ಓದಿದವರು ಯಾರಿಲ್ಲ ತಂದೆ
ವಿಶ್ವಜ್ಞಾನಿಯಾದೆ ದಾರಿದೀಪ ನೀನಾದೆ
ಭೀಮ ನೀ ಮುಗಿಯದ ಚರಿತೆ
ನೀನು ಜ್ಞಾನದ ಹಣತೆ.
ಶ್ರೀಮತಿ ಜ್ಯೋತಿ ಸಂಜು ಮುರಾಳೆ.

.gif)

.gif)


0 Comments