ನನ್ನೂರಲೊಂದು ಬೆಳಗು
ತೆರೆದುಕೊಳ್ಳುತ್ತಿದೆ ಬಾನು ರೆಕ್ಕೆ
ಬಿಚ್ಚಿ ಹಾರಲೆತ್ನಿನಿಸುವ ಹಕ್ಕಿ
ಯಂತೆ ಮುಂಜಾನೆಯ ಮುನ್ನ
ಗಲು ಬಾಯ್ತೆರೆದು ನಿಂತಿದೆ
ಎದೆ ಹಾಲಿಗೆ ಹಪಿ ಹಪಿಸುವಂತೆ
ಮಗುವೊಂದು ಹಂಬಲಿಸುವ
ತೆರದಿ ಉಷಾ ಪಾನಕೆ ಭೂಮಿ
ಹಾತೊರೆಯುತಿದೆ
ಓಹೋ ಅದೇನು ಬಾನ ಭಾಸ್ಕರ
ಕತ್ತಲ ಮನೆಯಿಂದ ನುಗ್ಗಿ
ಬಂದಂತೆ ಇನ್ನೂ ಮೈ ಕಪ್ಪಾ
ನಾವರಿಸಿ ಕೆಂಪಡರಿದೆ ಮುಗಿಲಂಚು
ನೋಡುತ್ತೇನೆ ನಾನಿಲ್ಲಿ ನಿತ್ಯ ಸೂರ್ಯ
ನುಟ್ಟುವ ಪರಿಯ.. ಗಿಡ ಮರ ನದಿ
ವನಗಳ ಹಿಂದಿಕ್ಕಿ ಓಡಿದಂತೆ ಮೇಲೆ
ರಿರಲು ಪಕ್ಷಿಗಳು ಸುತ್ತ ಹಾರುತಿವೆ
ಕಣ್ಣಿಗಬ್ಬವಿದು ನನಗದು ನೇಸರನು
ಮೈತಾಳಿರಲು ಬೀಸುವ ಗಾಳಿ
ಹಿತವೆನಿಸಿರಲು, ಅದೆಲ್ಲಿಯೋ ರವಿ
ಅದೆಲ್ಲಿಯೋ ನಾನು ಒಂದಾದಂತೆ
ಭ್ರಮೆ ಹುಟ್ಟಿಸದಿರನೆ ಆ ದಿನಕರನು
ತಾಜಾ ಹಣ್ಣಿನ ಅಂದದಲಿ ಬಯಕೆಯಿಂದಾರಿದ ಕಪಿಗೆ ಬಾಯಿ
ಗಾದುದು ಇದೇ ಅಲ್ಲವೇನು !
ಯಾವ ಚಿತ್ರಕಾರ ಬರೆದಿದ್ದಿದನು
ಇಬ್ಬನಿಯೊಳಗಿನ ಮಬ್ಬನು ಹೇಗೆ
ಬಿಡಿಸಿಹನು ಅನುಪಮ ಕಲಾಕರ
ನೋಡುವ ಕಣ್ಣು ನಿನಗಿದೆಯೇನು ?
ಹೀಗೆ ಇರಲಿ ನಿನ್ನ ದಿನಚರಿ. ಹಳೆದೆನ್ನ
ಲಾಗದು ನಿತ್ಯ ಹೊಸಪರಿ ಹರಿವ
ನದಿ ಅಲೆಗಳಲಿ ಸೂರ್ಯತೇಲುವ, ನೀ
ನಾದಿಸುವ ರಾಗ ಇಂಚರಗಳ ವೈಖರಿ
ಕೆಲ ಹೊತ್ತಷ್ಠೆ ಶಾಂತಮೂರ್ತಿ ರುದ್ರ
ಮೂರ್ತಿಯಾಗಿ ಉರಿವ ಮುನ್ನದಲಿ
ದರ್ಶನ ಮಾಡಿ ಬಿಡು.ಶುಭವಿದೆ ನಿನಗೆ
ನನಗೆ.ಬೆಳಗು ಎದೆಯೊಳಗಿಳಿಯಲೆಂದು
ಕೃತಿ

.gif)

.gif)


0 Comments