ವಿಜಯನಗರ ಜಿಲ್ಲಾ ಸಿಎಂಎಸ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬೌದ್ಧ ಪೂರ್ಣಿಮಾ ಜಯಂತಿಯ ಪೂರ್ವಭಾವಿ ಸಭೆ ಆಯೋಜನೆ

 ವಿಜಯನಗರ ಜಿಲ್ಲಾ ಸಿಎಂಎಸ್ ವತಿಯಿಂದ

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬೌದ್ಧ ಪೂರ್ಣಿಮಾ ಜಯಂತಿಯ ಪೂರ್ವಭಾವಿ ಸಭೆ ಆಯೋಜನೆ




ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬೌದ್ಧ ಪೂರ್ಣಿಮಾ ಜಯಂತಿಯ ಪೂರ್ವಭಾವಿ ಸಭೆ


ವಿಜಯನಗರ: ಏ.06: ವಿಜಯನಗರ ಜಿಲ್ಲಾ ಮಟ್ಟದ ಸಮುದಾಯದ ಸಭೆಯನ್ನು ಹರಪನಹಳ್ಳಿ ತಾಲೂಕು ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಯಿತು. ಹೋದ ತಿಂಗಳಲ್ಲಿ ಅಂದರೆ ದಿನಾಂಕ 25.03.2026ರಂದು ಬೆಂಗಳೂರಿನಲ್ಲಿ ನಡೆದ ಯಶಸ್ವಿ ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಭೀಮ ನಮನಗಳನ್ನು ಸಲ್ಲಿಸಲಾಯಿತು.


ಹಾಗೆಯೇ ಇದೇ ತಿಂಗಳು ಏಪ್ರಿಲ್ 14ರಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡುವಂತೆ ನಿರ್ಧರಿಸಲಾಯಿತು. ಮೇ 1ರಂದು ಬೌದ್ಧ ಪೂರ್ಣಿಮಾ ಜಯಂತಿಯನ್ನ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ಬುದ್ಧ ಬಾಬಾಸಾಹೇಬ್ ಅಂಬೇಡ್ಕರ್  ಬಸವಣ್ಣನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.


ಇನ್ನೂ ಹರಪನಹಳ್ಳಿ ತಾಲೂಕು ಛಲವಾದಿ ಮಹಾಸಭಾದ ನೂತನ ತಾಲೂಕು ಸಮಿತಿಯನ್ನ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಾಗಳಿ ಬಸವರಾಜ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ್, ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸುಧಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಇದೇ ವೇಳೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಿಂಡಿಕೇಟ್ ಸದಸ್ಯರು ಹಾಗೂ ಅಧ್ಯಕ್ಷರು, 

ವಿಜಯನಗರ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗ ಮತ್ತು ವಿಜಯನಗರ ಜಿಲ್ಲಾ ಛಲವಾದಿ ಮಹಾಸಭಾ, ಸಮಸ್ತ ಜಿಲ್ಲೆಯ ಎಲ್ಲಾ ತಾಲೂಕಿನ ಮುಖಂಡರು, ಹಿರಿಯ-ಕಿರಿಯರು ಜಲ್ಲಾ ಸಮಿತಿ ಸದಸ್ಯರು, ಮಹಿಳೆಯರು ಮತ್ತಿತರರು

ಪಾಲ್ಗೊಂಡಿದ್ದರು.


ವರದಿ : ಡಾ. ವಿಲಾಸ್ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ9591782353

Image Description

Post a Comment

0 Comments