ಬಡತನದ ಕತ್ತಲಲ್ಲಿ ಜ್ಞಾನದ ಬೆಳಕು: ಡಾ. ಸಿ.ಎಂ. ರಾಜಶೇಖರ್ ಎಂಬ ಸೇವಾ ಸೂರ್ಯ
ಬಡವರಿಗೆ ಆಶ್ರಯದಾತ ಡಾ.ಸಿ.ಎಂ.ರಾಜಶೇಖರ್
ಬೆಂಗಳೂರು: ಏ.06: ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಚಿಂತಲಮಡಿವಾಳ ಗ್ರಾಮದ ಸಾಧಾರಣ ಕುಟುಂಬದಲ್ಲಿ ಜನಿಸಿದ ಡಾ. ಸಿ.ಎಂ. ರಾಜಶೇಖರ್ ಅವರು ಗ್ರಾಮೀಣ ಕಷ್ಟಗಳನ್ನು ಹತ್ತಿರದಿಂದಲೇ ಕಂಡಿದ್ದರು. ಎಂ.ಎಸ್‌ಸಿ. ಪದವಿ ಪಡೆದು ಖ್ಯಾತ ಐಟಿ ಕಂಪನಿಯಲ್ಲಿ ಉನ್ನತ ನಿರ್ವಾಹಕರಾಗಿ ಸೇವೆ ಸಲ್ಲಿಸಿದರೂ, ಅವರ ಮನಸ್ಸು ಸದಾ ಸಮಾಜಮುಖಿಯಾಗಿತ್ತು. ವೈಯಕ್ತಿಕ ಯಶಸ್ಸಿಗಿಂತ ಸಾಮೂಹಿಕ ಏಳಿಗೆಯೇ ಮುಖ್ಯ ಎಂಬುದು ಅವರ ಜೀವನಮಂತ್ರ.
* ಸೇವಾ ಪಥಕ್ಕೆ ತಿರುವು ನೀಡಿದ ಮನಕಲುಕುವ ದೃಶ್ಯ:
ಪ್ರತಿದಿನದ ಸಂಚಾರ ಹಾದಿಯಲ್ಲಿ ಸಾಲು ಸಾಲು ಗುಡಿಸಲುಗಳು ಮತ್ತು ಅವುಗಳ ಎದುರಿಗೆ ಶಾಲೆಗಳು ಕಂಡುಬಂದವು. ಸಮವಸ್ತ್ರ, ಬ್ಯಾಗ್, ಹೊಳೆಯುವ ಶೂ ಧರಿಸಿ ಸಂಭ್ರಮದಿಂದ ಶಾಲೆಗೆ ಹೊರಟುಹೋಗುವ ಮಕ್ಕಳನ್ನು ಗುಡಿಸಲಿನ ಹೊಸ್ತಿಲಿನಲ್ಲಿ ಆಸೆಯಿಂದ ನೋಡುತ್ತಿದ್ದ ಗುಡಿಸಲು ಮಕ್ಕಳ ಕಣ್ಣುಗಳು ರಾಜಶೇಖರ್ ಅವರ ಹೃದಯವನ್ನು ಹಿಂಡಿದವು.
ಆ ಮಕ್ಕಳ ಕಣ್ಣಿನಲ್ಲಿ ಅಕ್ಷರಗಳ ತವಕಿತ್ತು, ಆದರೆ ಹೆತ್ತವರಿಗೆ ಆರ್ಥಿಕ ಶಕ್ತಿ ಅಥವಾ ದಾಖಲೆಗಳ ಕೊರತೆಯಿಂದ ಅದು ನನಸಾಗಲಿಲ್ಲ. ಗುಡಿಸಲಿನ ಕತ್ತಲೆ ಮತ್ತು ಶಾಲೆಯ ಜ್ಞಾನಬೆಳಕಿನ ನಡುವಿನ ಈ ಅಂತರ, ಮೆಟ್ರೋ ಕಾರ್ಮಿಕ ಪ್ರದೇಶದಲ್ಲಿ ಸಿಮೆಂಟ್ ಚೀಲುಗಳನ್ನು ಎಳೆಯುತ್ತಿದ್ದ ಮಗುವಿನ “ಒಂದು ಹೊತ್ತಿನ ಊಟಕ್ಕೂ ಕಷ್ಟ, ಶಿಕ್ಷಣ ಕನಸು” ಎಂಬ ಕಟುವಾಸ್ತವ—ಇವೆಲ್ಲವೂ ಅವರ ಸೇವಾ ಸಂಕಲ್ಪಕ್ಕೆ ಪ್ರಬಲ ಪ್ರೇರಣೆಯಾದವು. ಆ ಕ್ಷಣವೇ ‘ಕೆ.ಆರ್. ಸೇವಾ ಚಾರಿಟಬಲ್ ಟ್ರಸ್ಟ್’ ಅನ್ನು ಸ್ಥಾಪಿಸಿ, "ಜೀವನ ಚಿಕ್ಕದು, ಒಳ್ಳೆತನ ಶಾಶ್ವತ ಎಂಬ ದ್ಯೇಯವಾಕ್ಯಗಳಂತೆ" ಅಸಹಾಯಕ ಮಕ್ಕಳ ಬಾಳಿಗೆ ಬೆಳಕು ತರುವ ಗತಿಗೆ ತೊಡಗಿದರು.
* ಸಹಸ್ರಾರು ಜೀವನಗಳಿಗೆ ಆಶಾಕಿರಣ: ವಿಸ್ತೃತ ಸೇವಾ ಕಾರ್ಯಗಳು:
ಇಂದು ಅವರ ಕಾರ್ಯಕ್ಷೇತ್ರ ವಿಶಾಲವಾಗಿ ಬೆಳೆದಿದೆ:
"ಗುಡಿಸಲಿನಿಂದ ಶಾಲೆಗೆ": ಗುಡಿಸಲು ಮಕ್ಕಳನ್ನು ಹುಡುಕಿ, ಜನನ ಪ್ರಮಾಣಪತ್ರಗಳು ಸೇರಿದಂತೆ ದಾಖಲೆಗಳನ್ನು ಒದಗಿಸಿ, ಸಮವಸ್ತ್ರ-ಶೂ ಧರಿಸಿ ಇತರರ ಸಮಾನವಾಗಿ ಶಾಲೆಗೆ ಕಳುಹಿಸಿದ್ದಾರೆ.
*ಅಂದ ವಿದ್ಯಾರ್ಥಿಗಳ ದತ್ತು:
ಸುಮಾರು 50ಕ್ಕೂ ಹೆಚ್ಚು ಅಂದ ವಿದ್ಯಾರ್ಥಿಗಳನ್ನು ದತ್ತು ಪಡೆದು, ಅವರ ಶಿಕ್ಷಣ, ವಸತಿ, ಆಹಾರ ಮತ್ತು ಕೌಶಲ್ಯ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿ ವಹಿಸಿದ್ದಾರೆ. ಸಮಾಜದಲ್ಲಿ ಕಡೆಯಗಣನಿಯಾದ ಈ ಮಕ್ಕಳ ಬಾಳಿಗೆ ಬೆಳಕು ತಂದು, ವಿದ್ಯಾಭ್ಯಾಸದ ಮೂಲಕ ಅವರನ್ನು ಸ್ವಯಂ ದಾರಿದೀಪಗಳನ್ನಾಗಿ ಮಾಡುವುದೇ ಅವರ ಮುಖ್ಯ ಉದ್ದೇಶ—ಅವರು ಸಾವಿರಾರು ಇತರ ಅಂದ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು.
* ಶಿಕ್ಷಣ ಕ್ರಾಂತಿ:
ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಪುನರ್ನಿರ್ಮಿಸಿ, ಆಧುನಿಕ ತರಗತಿಗಳು, ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಡಿಜಿಟಲ್ ಯುಗಕ್ಕೆ ಸಜ್ಜುಗೊಳಿಸಿದ್ದಾರೆ.
* ವಲಸೆ ಕಾರ್ಮಿಕ ಮಕ್ಕಳ ಸಬಲೀಕರಣ:
620ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಪ್ರವೇಶ, ಉಚಿತ ಆಹಾರ ಮತ್ತು ವಿಶೇಷ ತರಗತಿಗಳ ಮೂಲಕ ಶಿಕ್ಷಣ ಖಚಿತಪಡಿಸಿದ್ದಾರೆ.
* ಪರಿಸರ ಸಂರಕ್ಷಣೆ:
ಇಲ್ಲಿವರಿಗೂ ಸಾವಿರಾರು ಗಿಡಗಳನ್ನು ನೆಡಿಸಿ, ಶಾಲೆಗಳಲ್ಲಿ ನೆಡುವಿಕೆಯ ಮೂಲಕ ಪರಿಸರಕ್ಕೆ ನಿರಂತರ ಕೊಡುಗೆ ನೀಡಿ ಸಮಾಜಕ್ಕೆ ಉತ್ತಮ ಮಾರ್ಗದರ್ಶಿಯಾಗಿದ್ದಾರೆ.
* ಇತರ ನೆರವು:
ಅನಾಥಾಶ್ರಮಗಳಿಗೆ ನಿರಂತರ ಬೆಂಬಲ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ-ಸಮವಸ್ತ್ರ ವಿತರಣೆ.
* ಮುಂದೆನ ಜೀವನ ಸಾರ್ಥಕತೆಯ ಕಡೆಗೆ ಸಾಗಲಿ:
ಎಲ್ಲರ ಬಾಳು ಸಾರ್ಥಕತೆಯ ಕಡೆಗೆ ಸಾಗಲಿ ಎಂಬ ಸಂದೇಶವನ್ನು ಜೀವಿಸುತ್ತಾ ಮುಂದುವರಿದಿದ್ದಾರೆ.
ಡಾ. ಸಿ.ಎಂ. ರಾಜಶೇಖರ್ ಅವರ ಜೀವನ ನಿಸ್ವಾರ್ಥ ಸೇವೆಯ ಸಂಕೇತ. ಗುಡಿಸಲು ಮಗು ಮಣ್ಣಿನ ಬೊಂಬೆಯಲ್ಲ, ಸಮಾಜದ ಆಸ್ತಿಯಾಗಬೇಕು ಎಂಬ ಕನಸು ನನಸಾಗುತ್ತಿದೆ. ಬಡತನ ಚಕ್ರವನ್ನು ಶಿಕ್ಷಣದ ಮೂಲಕ ಮುರಿದು, ಯುವ ಪೀಳಿಗೆಗೆ ಸ್ಪೂರ್ತಿಯಾಗಿ ನಿಂತಿದ್ದಾರೆ.
ಪರಿಚಯ:
ಡಾ. ಸಿ.ಎಂ. ರಾಜಶೇಖರ್ ಅವರು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದಲ್ಲಿ ಜನಿಸಿದರು. ಅವರು ಶ್ರೀ ಮುನಿಯಲ್ಲಪ್ಪ ಮತ್ತು ಶ್ರೀಮತಿ ಚಿಕ್ಕಮುನಿಯಮ್ಮ ದಂಪತಿಗಳ ನಾಲ್ಕನೇ ಪುತ್ರ.
ಅವರು ಎಂಎಸ್ಸಿ ಪದವೀಧರರು ಹಾಗೂ ಖ್ಯಾತ ಐಟಿ ಕಂಪನಿಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ ವೃತ್ತಿಜೀವನದೊಂದಿಗೆ ಸಮಾಜಮುಖಿ ಸೇವೆಯಲ್ಲಿಯೂ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ.
* ಸಮಾಜಮುಖಿ ಸೇವೆಯ ಪ್ರೇರಣೆ:
ಒಂದು ದಿನ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಪ್ರದೇಶಕ್ಕೆ ಭೇಟಿ ನೀಡಿದಾಗ, ಅಲ್ಲಿ ವಲಸೆ ಕಾರ್ಮಿಕರ ಸಂಕಷ್ಟವನ್ನು ನೇರವಾಗಿ ಕಂಡರು.
ಒಬ್ಬ ತಾಯಿ ತಾನು ಕೆಲಸ ಮಾಡುತ್ತಿದ್ದಾಗ, ಕೇವಲ 7-8 ವರ್ಷದ ಬಾಲಕನೂ ಸಿಮೆಂಟ್ ಹೊತ್ತು ತಾಯಿ ಜೊತೆಯಲ್ಲೇ ದುಡಿದುದನ್ನು ನೋಡಿ, ರಾಜಶೇಖರ್ ಅವರ ಹೃದಯ ತೀವ್ರವಾಗಿ ಸ್ಪಂದಿಸಿತು.
ಅವರು ಆ ಕುಟುಂಬದೊಂದಿಗೆ ಮಾತನಾಡಿದಾಗ, ಒಂದು ಹೊತ್ತಿನ ಊಟಕ್ಕೂ ಹಾಲೆದಡುವ ಪರಿಸ್ಥಿತಿಯಲ್ಲಿದ್ದರು ಎಂದು ತಿಳಿದುಬಂತು. ಶಿಕ್ಷಣದ ಕನಸೇ ಇರದ ಆ ಮಕ್ಕಳ ಸ್ಥಿತಿ ರಾಜಶೇಖರ್ ಅವರಿಗೆ ತೀವ್ರವಾಗಿ ತಟ್ಟಿತು.
ಅಲ್ಲಿಂದಲೇ ಸಮಾಜಮುಖಿ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕೆಂಬ ಸಂಕಲ್ಪ ಮಾಡಿದರು.
* ಪ್ರಮುಖ ಸೇವೆಗಳು:
12 ವರ್ಷಗಳಿಂದ “ಕೆ.ಆರ್. ಸೇವಾ ಚಾರಿಟಬಲ್ ಟ್ರಸ್ಟ್ (ರಿ.)” ಮೂಲಕ ಸಮಾಜಮುಖಿ ಸೇವೆ, ಆಹಾರ, ಬಟ್ಟೆ, ಆರೋಗ್ಯ ಸೇವೆ, ಪುನರ್ವಸತಿ ಮತ್ತು ಶಿಕ್ಷಣದಲ್ಲಿ ಶ್ರಮ, ಪ್ರತಿವರ್ಷ ದೃಷ್ಟಿಹೀನ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ಶಿಕ್ಷಣ ಹಾಗೂ ಬೆಳವಣಿಗೆಗೆ ನೆರವು, ಇಂದಿನ ತನಕ 50ಕ್ಕೂ ಹೆಚ್ಚು ಮಕ್ಕಳ ಜೀವನ ಬೆಳಗಿಸಿದ್ದಾರೆ. ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಪುನರ್‌ನಿರ್ಮಿಸಿ, ನವೀಕರಿಸಿದ ಕಾರ್ಯ, ಬಡ ಮಕ್ಕಳಿಗೆ ಉಚಿತ ಪಾಠ್ಯಪುಸ್ತಕಗಳು, ಸಮವಸ್ತ್ರಗಳು ಹಾಗೂ ವಿದ್ಯಾಸಾಮಗ್ರಿಗಳ ವಿತರಣೆ, ವಲಸೆ ಕಾರ್ಮಿಕರ ಮಕ್ಕಳಿಗೆ ಶಾಲಾ ಪ್ರವೇಶ, ಉಚಿತ ಆಹಾರ ಮತ್ತು ತರಗತಿಗಳ ಆಯೋಜನೆ, ಇತರ ಸಂಸ್ಥೆಗಳ ಸಹಯೋಗದೊಂದಿಗೆ, 620ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಪ್ರವೇಶ ಪತ್ರಗಳು ಹಾಗೂ ಆಹಾರ ವ್ಯವಸ್ಥೆ, ಅನಾಥಾಶ್ರಮಗಳಿಗೆ ದೈನಂದಿನ ಅಗತ್ಯ ವಸ್ತುಗಳು ಮತ್ತು ಸಾಮಗ್ರಿಗಳನ್ನು ಪೂರೈಸುವ ಮೂಲಕ ನಿರಂತರ ಸಹಾಯ.
* ಗೌರವಗಳು:
ಡಾ. ರಾಜಶೇಖರ್ ಅವರು ತಮ್ಮ ಸಮಾಜಮುಖಿ ಸೇವೆಗಾಗಿ ಅನೇಕ ಗೌರವಗಳನ್ನು ಪಡೆದಿದ್ದಾರೆ.
ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಸಹಾಯಕ ಹಸ್ತ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಶಿಕ್ಷಣ ರತ್ನ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗ್ಲೋಬಲ್ ಐಕಾನ್ ಎಕ್ಸಲೆನ್ಸ್ ಪ್ರಶಸ್ತಿ, ಲೀಡರ್ ಇನ್ ಅಚೀವ್‌ಮೆಂಟ್ ಪ್ರಶಸ್ತಿ, ರಾಷ್ಟ್ರೀಯ ರತ್ನ ಪ್ರಶಸ್ತಿ, ಮೈಸೂರು ರತ್ನ ಪ್ರಶಸ್ತಿ, ಉತ್ತಮ ಸಮಾಜಸೇವಕರು (ಎರಡು ಬಾರಿ), ಉತ್ತಮ ಶಿಕ್ಷಕ ಪ್ರಶಸ್ತಿ, ಭಾರತ ಸೇವಾ ಗೌರವ ಪ್ರಶಸ್ತಿ (2024), ಸಾಮಾಜಿಕ ನಾಯಕತ್ವ ಪ್ರಶಸ್ತಿ (2024), ಜೀವನ ಸಾಧನೆ ಪ್ರಶಸ್ತಿ (2025), ಕನ್ನಡ ಕೀರ್ತಿ ಪ್ರಶಸ್ತಿ (2025), ಪ್ರತಿಭಾ ಚೇತನ ಪ್ರಶಸ್ತಿ (2025), ಸ್ಟಾರ್ ಆಫ್ ಕರ್ನಾಟಕ (2025), ಡಾಕ್ಟರ್ ಅವಾರ್ಡ್ – ರಾಯಲ್ ಅಕಾಡೆಮಿ, ಭಾರತ ಜ್ಯೋತಿ – ರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಕರುನಾಡ ಕಲ್ಪವೃಕ್ಷ – ರಾಜ್ಯ ಪ್ರಶಸ್ತಿ, ಕರ್ನಾಟಕ ಬಿಸಿನೆಸ್ ಅವಾರ್ಡ್.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments