*ವರನಟ ರಾಜಕುಮಾರನ ಜನ್ಮದಿನದಂದು*
ವರನಟನು ನೀವೆಂದು ಘೋಷಿಸಿ
ಬಿರುದುಬಾವಲಿಗಳನು ಕನ್ನಡಿ-
ಗರಭಿಮಾನದೊಳಿತ್ತು ಮೆರೆದರು ಮುತ್ತುರಾಜರಿಗೆ|
ಸರಿಸರಾರೂ ನಿಮಗೆ ಕಾಣೆವು
ಮರಳಿ ಬನ್ನಿ ಚಿತ್ರರಂಗದ
ಹಿರಿಮೆಗರಿಮೆಗೆ ಸಾಕ್ಷಿಯಾಗಿರಿ ಜನಿಸಿ ಮತ್ತೊಮ್ಮೆ||೧೯೭||
{ ಸರಿಸ= ಸಮಾನ }
*ಕಿಗ್ಗಾಲು ಎಸ್ ಗಿರೀಶ್*
೨೪-೦೪-೨೦೨೬

.gif)

.gif)


0 Comments