*ಬಸವ ಜಯಂತಿ ಸಂಭ್ರಮ:* *ಸರಣಿ ವಚನ ದರ್ಶನ* *ಚಿಂತನಗೋಷ್ಠಿ*

 *ಬಸವ ಜಯಂತಿ ಸಂಭ್ರಮ:*

*ಸರಣಿ ವಚನ ದರ್ಶನ* *ಚಿಂತನಗೋಷ್ಠಿ* 




ರಾಯಬಾಗ:ಶರಣ ವಿಚಾರ ವಾಹಿನಿ ಹಾರೂಗೇರಿ,ಸಪ್ತಸಾಗರದ ಶ್ರೀ ಗುರು ಬಸವ ಸತ್ಸಂಗ ಸಮಿತಿ ಇವರ ಸಹಯೋಗದಲ್ಲಿ ಸಪ್ತಸಾಗರ ಗ್ರಾಮದ ಶರಣ ಬಸಪ್ಪ ಲಕ್ಷ್ಮಣ ಶಿರಗೂರ ಅವರ ವಿದ್ಯಾ ನಗರದ ತೋಟದ ಮಹಾಮನೆಯಲ್ಲಿ ರವಿವಾರ ದಿ. 12 ರಿಂದ ಸೋಮವಾರ ದಿ. 20 ರ ವರೆಗೆ ಅನುಭಾವಿಗಳಿಂದ ಘಟ್ಟಿವಾಳಯ್ಯನ ವಚನ ದರ್ಶನ ಚಿಂತನ ಗೋಷ್ಠಿ ನಡೆಯಲಿದೆ. ದರೂರ ಗ್ರಾಮದ ಶರಣ ಶ್ರೀ ಗಂಗಪ್ಪ ಶರಣರು ಹಾಗೂ ಕೊಣ್ಣೂರ ಗ್ರಾಮದ ಶರಣ ಡಾ. ಬಸವರಾಜ ಚೌಗಲಾ ಅವರಿಂದ ನಿತ್ಯ ಸಂಜೆ 7 ರಿಂದ 8.30 ರವರೆಗೆ ಅನುಭಾವ ನೀಡುವರು. ಸುಕ್ಷೇತ್ರ ನದಿ ಇಂಗಳಗಾಂವ ಗ್ರಾಮದ ಕುಮಾರ ಶಿವಯೋಗಿ ಮಠಪತಿ ಅವರು ಸಂಗೀತ ಸೇವೆ ನೆರವೇರಲಿದೆ ಎಂದು ಶರಣ ಶಿವಕುಮಾರ ಶಿರಗೂರ ಅವರು ಪ್ರಕಟಣೆಯಲ್ಲಿ ತಿಳಿಸಿರುವರು.


ಡಾ. ಜಯವೀರ ಎ. ಕೆ.

      ಖೇಮಲಾಪುರ

Image Description

Post a Comment

0 Comments