*ಬಸವನೆಂಬ ಮಾಮರ*

 *ಬಸವನೆಂಬ ಮಾಮರ* 



ಬಸವನೆಂಬ ಮಾಮರದ ತಂಪಿನಲಿ

ಹಣ್ಣುಗಳೆಂಬ ವಚನಗಳ ಕಂಪಿನಲಿ 

ಅಂತರಂಗ ಮಂಥನದ ಸೊಂಪಿನಲಿ

ಮೌನದಲಿ ಕುಳಿತೆ ನಾದದ ಇಂಪಿನಲಿ


ಬಸವ ತತ್ವಗಳಬೇರು ನೆಲದಾಳದಲಿ 

ಭೂತಾಯನಪ್ಪಿಕೊಂಡು ಪಸರಿಸುತಲಿ

ಹೊಸತಾಗಿ ಚಿಗಿತು ನಳನಳಿಸುತಲಿ

ಸಮತೆ ಮಮತೆಯ ನಿತ್ಯಕಲಿಸುತಲಿ


ದಾಸೋಹ ಕಾಯಕಗಳಲಿ ಸಮಾನತೆ

ದೇಶದ ಪ್ರಗತಿ ನ್ಯಾಯ ನೀತಿ ನೈತಿಕತೆ

ಲಿಂಗಭೇದ ಜಾತಿಭೇದ ತೊಡೆದುಹಾಕಿ 

ಸತ್ಯ ಶಾಂತಿ ಪ್ರೀತಿ ಜ್ಞಾನಬೀಜವ ಬಿತ್ತಿ


ಬಸವ ತತ್ವಗಳ ಮಾವಿನೆಲೆ ತೋರಣ

ಅಂತರಂಗದ ಅರಿವಿಗೆ ಅಷ್ಟಾವರಣ

ಆಚಾರವಿಚಾರಗಳೊಂದಿ ಅನಾವರಣ

ರಸಭರಿತ ಹಣ್ಣಿನ ವಚನ ಸಂಗ್ರಹಣ 


ಬಸವಪ್ರಭುವೇ ಪ್ರಜಾಪ್ರಭುತ್ವವಾದಿ

ಬಸವನೆಂದರೆ ಗುರು ಲಿಂಗ ಜಂಗಮ 

ಬಸವಣ್ಣನೆನಲು ಸ್ತ್ರೀಕುಲೋದ್ಧಾರಕ

ಬಸವನೆಂದರೆ ಮಾಮರದ ಹೆಮ್ಮರ


 *ಅನ್ನಪೂರ್ಣ ಸು ಸಕ್ರೋಜಿ* *ಪುಣೆ*

Image Description

Post a Comment

0 Comments