ಕರ್ನಾಟಕದ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರು : ಡಾ. ಎಸ್ ಎಮ್ ಹೆಳವರ
ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ ಇವುಗಳ ಸಹಯೋಗದಲ್ಲಿ ವಿಶ್ವಗುರು ಬಸವಣ್ಣವರ 893 ನೇಯ ಜಯಂತಿಯನ್ನು ಆಚರಿಸಲಾಯಿತು. ಪ್ರಾರಂಬದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ನಮನ ಸಲ್ಲಿಸಲಾಯಿತು. ಈ ಸಮಾರಂಭದ ಮುಖ್ಯ ಅತಿಥಿಗಳಾದ ಡಾ ಎಸ್ ಎಂ ಹೆಳವರ ಮಾತನಾಡಿ ಯಾರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಸಬೇಕು ಬದುಕಿನಲ್ಲಿ ಇರುವ ಅಜ್ಞಾನ ಅಂಧಕಾರ ಕಳೆಯಲು ಗುರುವಿನಿಂದ ಮಾತ್ರ ಸಾಧ್ಯ ಅಂತಹ ಗುರುವಿನ ಮಾರ್ಗದರ್ಶನದೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು, ಒತ್ತಡದ ಬದುಕಿನ ಮಧ್ಯೆಯು ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. 12 ನೇ ಶತಮಾನದ ಬಸವಾದಿ ಶರಣರು ರಚಿಸಿರುವ ವಚನಗಳಲ್ಲಿ ಜೀವನದ ಮೌಲ್ಯಗಳಿದ್ದು ಅವು ಸಾರ್ವಕಾಲಿಕ ಮೌಲಿಕವಾಗಿವೆ, ಬಸವಣ್ಣನವರ ಸಂದೇಶಗಳು ಅವರ ವಚನಗಳು ಇವತ್ತಿಗೂ ನಮಗೆ ಪ್ರಸ್ತುತವಾಗಿವೆ. ಬಸವಣ್ಣನವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಶ್ರೀ ಎಸ್ ಎಸ್ ಉಮರಾಣಿ ಮಾತನಾಡಿ 12ನೇ ಶತಮಾನದಲ್ಲಿ ಸಾಮಾಜಿಕ ಧಾರ್ಮಿಕ ಸಮಾನತೆಗಾಗಿ ಬಸವಣ್ಣನವರು ಕಲ್ಯಾಣದಲ್ಲಿ ನಡೆಸಿದ ಕ್ರಾಂತಿಯು ಕರ್ನಾಟಕದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಹಿಂದಿ ಉಪನ್ಯಾಸಕರಾದ ಡಾ. ಸಿ ಡಿ ಠಾಣೆ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಶ್ರೀ ಕೆ ಎಸ್ ಹಾರೂಗೇರಿ, ಎನ್ಎಸ್ಎಸ್ ಸಹ ಶಿಬಿರಧಿಕಾರಿ ಶ್ರೀ ಭರತೇಶ ಕಾಂಬಳೆ, ಸ್ಕೌಟ್ ಮತ್ತು ಗೈಡ್ಸ್ ರೋವರ್ ಅಧಿಕಾರಿಯಾದ ಡಾ ವಿಲಾಸ್ ಕಾಂಬಳೆ, ಡಾ ಬಿ ಆರ್ ಟೋಮರೆ, ಶ್ರೀ ಆರ್ ಕೆ ಕಟಾವಿ, ದೈಹಿಕ ನಿರ್ದೇಶಕಿಯರಾದ ಅನಸುಯಾ ಜೋಗಣ್ಣವರ್, ಶ್ರೀಮತಿ ವಿಜಯಲಕ್ಷ್ಮೀ, ಕೆರಕಲಮಟ್ಟಿ, ಶ್ರೀ ವಿಠ್ಠಲ್ ಬನಾಜ, ಶ್ರೀ ಶಿವಾನಂದ ಸೂಳೇಬಾವಿ ಹಾಗೂ ಮತ್ತಿತರ ಉಪಸ್ಥಿತರಿದ್ದರು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments