*ಬಸವಣ್ಣನವರು*
⭐⭐⭐⭐⭐⭐⭐⭐⭐
ಜಗಜ್ಯೋತಿ ಭಕ್ತಿ ಬಂಡಾರಿ ಕಾಯಕವೇ ಕೈಲಾಸವೆಂದವರು, ದಯೆಯೇ ಧರ್ಮದ ಮೂಲವಯ್ಯ ಎಂದವರು
ನಮ್ಮ ಸಿರಿಗಂಧದ ನಾಡಿನಲ್ಲಿ ಜನಿಸಿದವರಾದ ಬಸವಣ್ಣನವರು. *ಅವರ ಜನ್ಮದಿನವೂ ಸಹ ಅಕ್ಷಯ ತೃತೀಯದಂದು*
ಹೇಗಿದೇ ನೋಡಿ ಪುಣ್ಯಪುರುಷರು ಜನ್ಮ ತಾಳಿದ ದಿನದಂದೇ ಜನ್ಮ ತಾಳಿದವರು ನಮ್ಮ ಬಸವಣ್ಣ ನವರು.
ಅದಕ್ಕೇ ಇಂದಿಗೂ ಸಹ ಅವರ ವಚನಗಳ ಸಾರವನ್ನು ಅರಿತು ಓದುವ ವಿದ್ಯಾರ್ಥಿ ವೃಂದದವರು ಅಕ್ಷಯ ವಾಗುತ್ತಲೇ ಇದ್ದಾರೆ.
ಇಡೀ ವಿಶ್ವದಲ್ಲೇ ಇವರ ಅನುಯಾಯಿಗಳು ತುಂಬಿರುವರು.
ಇಂದಿಗೂ ಇವರ ವಚನಗಳು ನಿತ್ಯವೂ ಪ್ರಚಲಿತದಲ್ಲಿರುವುದು.
ಸ್ತ್ರೀಯರಿಗೂ ಸಹ ಸಮಾನವಾದ ಹಕ್ಕನ್ನು ಕೊಟ್ಟವರು.
ಸ್ತ್ರೀಯರಿಗೆ
ಮಾತೃಸ್ಥಾನವನ್ನು ಕೊಡುತ್ತಿದ್ದರು. ಅನುಭವಮಂಟಪದಲಿ ಅನೇಕ ವಚನ ಗಾರ್ತಿಯರು ಇದ್ದರು,
ಅವರ ವಚನಗಳು ಬೆಳಕಿಗೆ ಬರುವಂತೆ ಮಾಡಿದವರು.
ಬಸವಣ್ಣನವರನ್ನು ಕಂಡರೆ ಭಕ್ತಿಯಿಂದ ವಂದಿಸುತ್ತಿದ್ದರು.
ಇಂದಿಗೂ ಸಹ ಬಸವಣ್ಣನವರು ಎಲ್ಲರ ಮನದಲ್ಲೂ ಇರುವರು. ಅಜರಾಮರಾಗಿಹರು.
~~~~~~~~~~~~~~~~~
*ರಮಾದೇವಿ. ಎಂ ಎಸ್*
*ಹಾಸನ*

.gif)

.gif)


0 Comments