🌹*ಗಜ಼ಲ್*🌹
ಇರುಳ ಬೆಳಕಲಿ ಸುಳಿದಾಡಿ ಮನಹೊಕ್ಕಿದೆ ಹರ್ಷದಿ ನಿಶಾ ಮಂಜರಿ
ಯುಗಳ ಗೀತೆಗೆ ಕುಣಿದಾಡಿ ಸೆರೆಸಿಕ್ಕದಾಗ ಆದೆ ನೀ ಎನ್ನ ದಿನಚರಿ
ಜಟಿಲ ಜಾಲದಲಿ ಸಿಲುಕಬೇಡ ಸಲೀಲನ ಲೀಲೆಗೆ ಮೈಸೋಕಿಸು ಸಾಕು
ಮೃದುಲ ಮತಿಯ ತೋರುತ ಹಿಡಿದೆ ನಿನಗೆ ಒಲವಿನ ವಂದರಿ
ಯಾವ ಲೋಕದ ದೇವಕನ್ಯೆಯೋ ಸರ್ವ ಕಾಲಕೂ ಕಚಗುಳಿ ಇಡುವ ಕಾಮಿನಿ
ನೋವ ಮರೆತು ನಲಿವಿನಲಿ ಮಿಂದಿರುವೆ ಆಗುವೆಯಾ ಜೋಗಿಯ ಕಿಂದರಿ
ಗಂಟೆಗಳ ಲೆಕ್ಕವ ಲೆಕ್ಕಿಸದೆ ನಿನ ಲಕ್ಷ್ಯವ ಎನ್ನೆಡೆಗೆ ಸೆಳೆಯುವ ಆಸೆ
ಅಂತೆಗಳ ಕಂತುಗಳನು ಜರೆದು ಬರೆದೆ ಮರೆಯದ ಕಾದಂಬರಿ
ಮಂದಾರ ಹೂವ ಮಾಲೆಯನು ಹೆಣೆದು ನಿನ ಮುಡಿಗೆ ಮುಡಿಸುವೆ ಬಾರೆ
ಕುಮಾರ ಪರ್ವದ ನಾಯಕಿ ಸದಾ ನೆಲೆಸಿರುವೆ ಹೃದಯದಲಿ ಸುಂದರಿ
🎸ಸುಕುಮಾರ

.gif)

.gif)


0 Comments