ಜಾನಪದ ಶೈಲಿ ಗೀತೆ

 ಜಾನಪದ ಶೈಲಿ ಗೀತೆ 



*ಯಾರಿಲ್ಲಾ ನಿಗ್ಹಾಂಗ್*


ಯಾರ್ ಇಲ್ಲಾ ನಿನ್ಹಾಂಗ್  ಗೆಳತಿ...

ನಿನ್ ರೂಪಾ ಕಣ್ಣಾಗ್ ಕುಣಿತೈತಿ

ನೆನೆವಾಗ್ ನಿನ್ನ ತಂಗಾಳಿ ಸೂಸೈತಿ

ಹೃದಯದಾಗ್ ನಿನ್ನ ಪ್ರೇಮ ಬಯಸೈತಿ


ನೀ ನನ್ನ ಹತ್ತಿರ ಹತ್ತಿರ ಬಂದ್ಹಂಗ

ನನ ಮನಸ್ಸಗಾತ್ ರಂಗು ರಂಗ್ 

ಪ್ರೀತಿ ಕುಣಿತೈತಿ ಮೈ ಮನದಾಗ

 ಸ್ಪರ್ಶಿಸಿದಂಗ್ ನಾ  ನಿನ್ನಂಗಾಗ್


ಪಕ್ಷಿಹಂಗ್ ಹಾರೋಣು ಆಕಾಶದಾಗೆ

ಜೋತು ಬಿದ್ದೀನಿ ನಾ ನಿನ್ನ ಜಡೆಯಾಗೆ

ಸತ್ರೂ ಇದ್ರೂ ಇನ್ಮ್ಯಾಗೆ ನಿನ್ ಜತೆನಾಗೇ

ಏನೇ ಅದರೂವೆ ಬಿಡಲೊಲ್ಲೆ ಒಸಗೆ


ಜನುಮ ಪೂರಾ ಕೂಡೇ ಬಾಳೋಣು

ಪಿರೂತಿ ಒಂದೇ ಅಸ್ತಿ ಅನ್ನೋಣು

ಬಂಡಿ ನೀನಾದ್ರೆ ಚಕ್ರ ನಾನಾದೇನು

ಪಕ್ಕದಾಗೆ ನೀನಿರಲು ಬಾಳೇವು ಹಾಲ್ಜೇನು


*ಅಶೋಕ ಬೇಳಂಜೆ*

Image Description

Post a Comment

0 Comments