ನಿಪ್ಪಾಣಿಯಲ್ಲಿ ಎರಡನೇ ಹಂತದ ತರಬೇತಿ ಯಶಸ್ವಿಯಾಗಿ ನಡೆಯಿತು : ತಹಸಿಲ್ದಾರ್ ಮುಂಜೆ
ನಿಪ್ಪಾಣಿ: ಭಾರತ ದೇಶದಲ್ಲಿ ಏಪ್ರಿಲ್ 16ರಿಂದ ಮೇ 15ರ ವರಗೆ ನಡೆಯುತ್ತಿರುವ ಜನಗಣತಿ 2027ರ ತರಬೇತಿ ಅಂಗವಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಮೊದಲ ಹಂತದ ತರಬೇತಿಯನ್ನು ಯಶಸ್ವಿಯಾಗಿ ನಡೆಯಿತು ಎಂದು ನಿಪ್ಪಾಣಿ ತಾಲೂಕಿನ ತಹಸಿಲ್ದಾರ್ ಸುರೇಶ್ ಮುಂಜೆ ತಿಳಿಸಿದರು
ಶನಿವಾರ ಕೆಎಲ್ಇ ಸಂಸ್ಥೆಯ ಜಿ ಆಯ್ ಬಾಗೇವಾಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಎರಡನೇ ಹಂತದ(06.04.2026 ರಿಂದ 08.04.2026) ಗಣತಿದಾರರಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಿಪ್ಪಾಣಿ ತಾಲೂಕಿನ ಶಿಕ್ಷಕರಾದ ನೀವುಗಳು ಎರಡನೇ ಹಂತ ತರಬೇತಿಯನ್ನು ಪಡೆದಿರುತ್ತೀರಿ. ನೀವು ಪಡೆದಿರುವ ತರಬೇತಿಯನ್ನು ಮನನ ಮಾಡಿಕೊಂಡು ತಮಗೆ ವಹಿಸಿರುವ ಎಚ್ಎಲ್‌ಬಿ ಮ್ಯಾಪ್ ನಲ್ಲಿ ತಮಗೆ ವಹಿಸಿರುವ ಬ್ಲಾಕ್ ಗಳಲ್ಲಿ ಕಡ್ಡಾಯವಾಗಿ ದಿನಾಂಕ 15.04.2026 ರಿಂದ ಗಣತಿಕಾರ್ಯವನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು.
ಮೂರು ದಿನಗಳ ಕಾಲ ನಮ್ಮ ಮಾಸ್ಟರ್ ತರಬೇತಿದಾರರು ನಿಮಗೆ ಜನಗಣತಿಯ ಪ್ರಮುಖವಾದ ಅಂಶಗಳನ್ನು ಮತ್ತು ಹಂತಗಳನ್ನು ತಿಳಿಸಿದ್ದಾರೆ. ಹಾಗಾಗಿ ನೀವುಗಳು ಸಹ ತರಬೇತಿ ಪಡೆದಿದ್ದೀರಿ. ನಂತರ ನೀವು ಜನಗಣತಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತೀರಿ ಎಂದು ಭಾವಿಸುತ್ತೇನೆ. ಇದರೊಂದಿಗೆ ಗಣತಿದಾರರು ಮತ್ತು ಮೇಲ್ವಿಚಾರಕರು ಎತ್ತಿದ ಸಂದೇಹದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜನಗಣತಿ ಕಾರ್ಯ ಯಶಸ್ವಿಯಾಗಿ ನಡೆಯಲ್ಲಿ ದೇಶಕ್ಕೆ ನಿಮ್ಮ ಕೊಡುಗೆ ಅಪಾರವಾಗಿ ಇರಲಿ ಎಂದು ಶುಭ ಹಾರೈಸಿದರು.
ತರಬೇತಿಯಲ್ಲಿ ಭಾಗವಹಿಸಿದ ಮೂವರು ಗಣತಿದಾರರು ತರಬೇತಿಯನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತರಬೇತಿದಾರರಾದ ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಅಕ್ಕ ಮಹಾದೇವಿ ಅವರ ಒಂದು ವಚನ ಹೇಳುವುದರ ಮೂಲಕ ಜೊತೆಗೆ ಜನಗಣತಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಹತ್ತು ಜನ ಕ್ಷೇತ್ರ ತರಬೇತಿದ್ದರು ಹಾಗೂ 244 ಗಣತಿದಾರರು ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಂದಾಯ ಇಲಾಖೆ ಶಿರಸ್ತದಾರ ಹೆಚ್ ಎಂ ಶಿವಣಿಗಿ ಹಾಗೂ ರೆವಿನ್ಯೂ ಇನ್ಸ್ಪೆಕ್ಟರ್ ರವಿಕುಮಾರ್ ಮಾದಲಿ ತಾಲೂಕು ಆಡಳಿತ, ನಗರಸಭೆ ಆಡಳಿತ ಮತ್ತು ಪುರಸಭೆ ಆಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ಗ್ರಾಮಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments