ದೂರ ಸರಿದವಳು

 ದೂರ ಸರಿದವಳು



ಆಕಸ್ಮಿಕದಿ ಅನುರಾಗದಿಂದ ಬಂದವಳು

ಬೇಲೂರಗುಡಿ ಚೆಲುವೆಯಂತವಳು |

ಡಕಣಾಚಾರಿಯೆ ಕೆತ್ತಿದ ಶಿಲಬಾಲಿಕೆಯಿವಳು 

ಶಿಲೆಗೂ ಕಲೆಗೂ ಮೆರಗು ತಂದವಳು II 


ನಿತ್ಯವೂ ಹರಿಸುತ್ತಿದ್ದಳು ಸವಿ ಮಾತಿನ ಲಹರಿ

ಸೌಂದರ್ಯ ಶೃಂಗಾರ 

ಮೆಚ್ಚುವ ವಿಹಾರಿ 1

ದಿನ ದಿನವೂ ಹುಚ್ಚೆಬ್ಬಿಸುವ ಸುಂದರಿ 

ಒಂದೊಂದು ಹೆಜ್ಜೆ ಹಾಕಿದರು ನಾಟ್ಯ ಮಯೂರಿ II 


ದುರ್ಗದ ಚೆಲುವೆಯ ಹೃದಯವಲ್ಲಿ ಬಿಕ್ಕಳಿಸುತ್ತಿತ್ತು 

ನನ್ನ ಮನವು ಕೂಡ ಇಲ್ಲಿಂದು ಒದ್ದಾಡುತ್ತಿತ್ತು  1 

ನನ್ನನ್ನು ಒಂದು ಬಾರಿಯಾದರೂ ಬಯ್ಯಬಾರದಿತ್ತೆ

ನೀ ಒಳ್ಳೆಯವ ನಲ್ಲ ವೆಂದು ಹೇಳಬಾರದಿತ್ತೆ? II


ನಿನ್ನ ಮೇಲೆ ಪ್ರೀತಿ ಅಭಿಮಾನವಿದೆ ಎಂಬ ಕೊನೆಸಾಲು ಬರೆದವಳು 

ನಿನ್ನ ಮೇಲೆ ಒಲವಿದೆ ಎನ್ನುತ್ತಾ ದೂರ ಸರಿದವಳು

ನನ್ನೊಂದಿಗೆ ಮಾತನಾಡುತ್ತಾ ಮೌನವಾದವಳು ನೂರೊಂದು ನೆನಪಾಗಿ ಎದೆಯೊಳಗೆ ಉಳಿದವಳು II


✍️ ಜೆಕೆ ಬಸವರಾಜು ಜಯಪುರ🌱

Image Description

Post a Comment

0 Comments