*ಬಳಲಿದನೇ ದಡ್ಡಣ್ಣ?*

 *ಬಳಲಿದನೇ ದಡ್ಡಣ್ಣ?*



ದರಧುರದ ಭಾರದಲಿ ಬೆಂಡಾ-

ಗಿರುವಮೇರಿಕ ಶಿರವನೊಲೆಯುತ-

ಲೆರಡು ವಾರದ ಯುದ್ಧರಜೆಯನು ಬೇಡಿಕೊಂಡಾಗ|

ತೆರೆಯುವೆವು ಹಾರ್ಮೋಜು ಕಡಲನು

ತೆರಿಗೆ ಭಾರವನೊಪ್ಪಿಕೊಳ್ಳಿರಿ

ತಿರುಗಿ ಕೆಣಕಿದರಿರೆವು ಸುಮ್ಮನೆ ನಾಲ್ಕು ಮಡಗುವೆವು||೧೯೦||


{ ಧರಧುರ= ಆರ್ಭಟ,ಗರ್ಜನೆ; ಬೆಂಡಾಗಿರುವ+ಅಮೇರಿಕ; ಶಿರವನು+ ಒಲೆಯುತ; ಒಲೆಯುತ= ಆಡಿಸುತ್ತ }


*ಕಿಗ್ಗಾಲು ಎಸ್ ಗಿರೀಶ್*

೦೮-೦೪-೨೦೨೬

Image Description

Post a Comment

0 Comments