ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ : ನಾಭಿರಾಜ ಖೋತ್
ಕಾರದಗಾ: ಸಮಾಜದಲ್ಲಿ ಪ್ರತಿಯೊಬ್ಬರು ಈ ನಾಡಿನ ಜನರಿಗಾಗಿ ಒಂದಲ್ಲ ಒಂದು ರೀತಿಯ ಸೇವಾ ಮನೋಭಾವವನ್ನು ಮಾಡಿಕೊಂಡು ದಾನಗಳನ್ನು ನೀಡುತ್ತಾರೆ. ಇದರಿಂದ ಸಮಾಜಕ್ಕೆ ತಮ್ಮ ಕೈಲಾದ ಕೊಡುಗೆಯನ್ನು ನೀಡುತ್ತಾ ಬರುತ್ತಾರೆ. ಅಂತಹ ದಾನಗಳಲ್ಲಿ ರಕ್ತದಾನವು ಮಹತ್ವದ ದಾನವಾಗಿದೆ ಎಂದು ಬೇಡಿಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯ ಕನ್ನಡ ಮತ್ತು ಇಂಗ್ಲಿಷ್ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ನಾಭಿರಾಜ್ ಕೋತ್ ಅವರು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭಾನುವಾರ ಕಾರದಗಾದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೇಡಿಕಿಹಾಳದ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್ ಕ್ರಾಸ್, ಸ್ಕೌಟ್ ಅಂಡ್ ಗೈಡ್ಸ್, ಎನ್ ಸಿಸಿ, ಚಿಕ್ಕೋಡಿಯ ಅಂಕುರ ಬ್ಲಡ್ ಬ್ಯಾಂಕ್, ಯೂತ್ ರೆಡ್ ಕ್ರಾಸ್ ಸಹಯೋಗದೊಂದಿಗೆ 2025-2026ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಾನ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ. ರಕ್ತವು ಅತ್ಯಂತ ಪವಿತ್ರವಾದ ದಾನವಾಗಿದೆ. ಒಬ್ಬ ರೋಗಿಯ ಜೀವವನ್ನು ಉಳಿಸುವುದಕ್ಕೆ ರಕ್ತ ಅವಶ್ಯಕತೆ ಬೇಕು. ಆ ವ್ಯಕ್ತಿಯ ಪ್ರಾಣವನ್ನು ಉಳಿಸಲು ಸಮಾಜದ ಯುವಕರು ತಮ್ಮಲ್ಲಿರುವ ಅಮೂಲ್ಯವಾದ ರಕ್ತವನ್ನು ಬೇರೊಬ್ಬ ಅಸಹಾಯಕರಿಗೆ ಹಾಗೂ ರೋಗಿಗಳಿಗೆ ದಾನ ಮಾಡುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಾಗೆಯೇ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿ.ಎಸ್. ನಾಡಗೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಅಭಿನಂದನ್ ಮುರಾಬಟ್ಟೆ ಇವರು ರಕ್ತದಾನದ ಹಾಗೂ ಶಿಬಿರದ ಮಹತ್ವವನ್ನು ಕುರಿತು ಶಿಬಿರಾರ್ಥಿಗಳಿಗೆ ಪ್ರಯೋಜನ ತಿಳಿಸಿದರು. ಮುಖ್ಯ ಅತಿಥಿಗಳಾದ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀ ಸುದೀಪ್ ಉಗಳೇ ಅವರು ಮಾತನಾಡುತ್ತಾ ಎನ್ಎಸ್ಎಸ್ ನ ಧೇಯೋದ್ದೇಶಗಳ ವಿವರಿಸುತ್ತಾ ರಾಷ್ಟ್ರೀಯ ಸೇವಾ ಯೋಜನೆ 'ನನಗಲ್ಲ ನಿನಗೆ' ಎಂಬ ಸೇವಾ ಮನೋಭಾವನೆಯನ್ನು ಹೊಂದಿದ್ದು ಹೀಗೆ ಹಲವಾರು ಸಮಾಜ ಪರವಾಗಿ ಅಂತ ಹಾಗೂ ಸೇವಾ ಪರವಾದ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಇದಕ್ಕೆ ನೀವು ಸಹ ಕಾರಣಕರ್ತರಾಗಿದ್ದೀರಿ ಎಂದು ಶಿಬಿರಾರ್ಥಿ ಅಭಿನಂದಿಸಿದರು. ವೀರಾಂಗನ ಕರಿಯರ್ ಅಕಾಡೆಮಿ, ಕಾರದಗಾ ಇದರ ಅಧ್ಯಕ್ಷರಾದ ಶ್ರೀ ರಣಜಿತ್ ಥೋರಬೋಲೆಯವರು ಭಾರತದ ಅಭಿವೃದ್ಧಿಗೆ ಯುವಕರ ಜವಾಬ್ದಾರಿಗಳ ಕುರಿತು ಉಪನ್ಯಾಸ ಮಾತನಾಡಿದರು.
ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಂಕುರ್ ಬ್ಲಡ್ ಬ್ಯಾಂಕಿನ ಸಿಬ್ಬಂದಿಗಳಾದ ಶ್ರೀ ಭರತ್ ಸಪ್ತಸಾಗರೆ, ಶ್ರೀ ಗಜಾನನ ಸಾವಂತ್ ಜೇಜ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ಶಿಬಿರಾರ್ಥಿ ಕು.ಪ್ರಜ್ಞ ಲಮಾಣಿ ಸ್ವಾಗತಿಸಿದರು ಕುಮಾರಿ ಶ್ರೀದೇವಿ ಪೂಜಾರಿ ನಿರೂಪಿಸಿದರು. ರಕ್ತದಾನ ಶಿಬಿರ ದಲ್ಲಿ ಸುಮಾರು 25ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು.
ವರದಿ : ಡಾ. ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments