ಡಾ. ಶಿಲಾಸೂ ರಚನೆಯ "ಅರಳಿ ಬಾ ಮರಳಿ" ಕೃತಿ ಬಿಡುಗಡೆ

 ಡಾ. ಶಿಲಾಸೂ ರಚನೆಯ "ಅರಳಿ ಬಾ ಮರಳಿ" ಕೃತಿ ಬಿಡುಗಡೆ

         


********

ಕಲಬುರಗಿ : ದಿನಾಂಕ : 14.04.2026 ರಂದು ಜರುಗಿದ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್, ಅವರ 135 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಡಾ|| ಬಿ. ಆರ್. ಅಂಬೇಡ್ಕರ್ ಅವರ ಕುರಿತು ರಚಿಸಿದ ಕಲಬುರಗಿಯ ಡಾ|| ಶಿವಕುಮಾರ. ಲಾ. ಸೂರ್ಯವಂಶ, ಅವರ "ಅರಳಿ ಬಾ ಮರಳಿ" ಕವನ ಸಂಕಲನ ಕೃತಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಉದ್ಝಾಟಕರಾದ ಶ್ರೀ, ಅರುಣಕುಮಾರ. ಎಂ.ವೈ. ಪಾಟೀಲ್, ಮಾನ್ಯ ಅಧ್ಯಕ್ಷರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕರ್ನಾಟಕ ಸರ್ಕಾರ ಹಾಗೂ ಶ್ರೀಮತಿ, ಡಾ|| ಬಿ. ಸುಶೀಲಾ, ವ್ಯವಸ್ಥಾಪಕ ನಿರ್ದೇಶಕರು, (ಭಾಆಸೇ) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಇವರು ಕೃತಿ ಬಿಡುಗಡೆಗೊಳಿಸಿದರು.

ಇದೇ ವೇದಿಕೆಯಲ್ಲಿ ಸಾಹಿತಿ ಸಂಜಯ್ ನ್ಯಾಕಲ್, ಕಾರ್ಮಿಕ ಮುಖಂಡರಾದ ಶ್ರೀ, ಚಂದ್ರಕಾಂತ ಗದ್ದಗಿ, ಶ್ರೀ, ರಾಜಕುಮಾರ. ಎಂ. ಗೌತಮ್, ಶ್ರೀ, ಮಾರುತಿ ಶಾಖಾ, ಶ್ರೀ, ದೇವರಾಜ ಚೌರ್, ನಿಗಮದ ಹಿರಿಯ ಅಧಿಕಾರಿಗಳಾದ ಶ್ರೀ, ಚಂದ್ರಕಾಂತ ಫುಲೇಕರ್, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಶ್ರೀ, ಬಸವರಾಜ. ಸಿ. ಬೆಳಗಾವಿ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು, ಶ್ರೀ, ಸಂತೋಷಕುಮಾರ ಗೊಗೇರಿ, ಮುಖ್ಯ ಯಾಂತ್ರಿಕ ಅಭಿಯಂತರರು ಶ್ರೀ, ವಿ. ಎಚ್. ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕರು ಹಾಗೂ ಶ್ರೀ, ಮಹಿಪಾಲ.ಎಸ್. ಬೇಗಾರ, ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಮತ್ತಿತರು ಹಾಜರಿದ್ದರು. ಕಾರ್ಯಕ್ರಮದ ನಿರೂಪಕರಾದ ಶ್ರೀ, ವೀರಭದ್ರಪ್ಪ, ಅವರು ಕೃತಿಯ ಕುರಿತು ಮಾತನಾಡಿ, ಒತ್ತಡ ಕೆಲಸ ಕಾರ್ಯಗಳ ಮದ್ಯ ಕೃತಿ ರಚಿಸುವುದು ಸಾಮಾನ್ಯ ಕೆಲವೇನು ಅಲ್ಲ. ಇದು ಒಂದು ಸಾಧನೆಯೇ ಸರಿ. ಇವರ 20 ವರ್ಷದ ಸಾಹಿತ್ಯ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ಮತ್ತು ಪುರಸ್ಕಾರ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

 ಕಾರ್ಯಕ್ರಮದ ಕೊನೆಗೆ ಡಾ|| ಶಿವಕುಮಾರ. ಲಾ. ಸೂರ್ಯವಂಶ ಅವರಿಗೆ ಮುಖ್ಯ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಶೇಗುಣಶಿ 

ಮೋ: 9591782353

Image Description

Post a Comment

0 Comments