*ಭರವಸೆ*
ಶಿವ ನೀಡಿದ ಬಾಳೆಂಬ ಬನದಲಿ
ಕಲ್ಲಿನ ಹೃದಯದಲು ಹಸಿರು ಚಿಗುರಲಿ
ಬತ್ತಿದ ಎದೆಯಿಂದ ಸೆಲೆಯೊಡೆಯಲಿ
ಪ್ರಕೃತಿಯ ವಿಸ್ಮಯ ಜಗದೆಲ್ಲೆಡೆ ಸಾರಲಿ
ತಪಸ್ವಿಗಳ ವರದಹಸ್ತವೆ ಹಸಿರಾದಂತೆ
ದೇವರೇ ಕಂಡಂತೆ ಅವರವರ ಭಾವದಂತೆ
ಪರಸ್ಪರ ಪ್ರೀತಿಯಲಿ ಸಹಕರಿಸಿ ಮೆರೆದಂತೆ
ಮನುಕುಲಕೆ ಶಾಂತಿ ಸಂದೇಶವ ನೀಡಿದಂತೆ
ಸಾಮರಸ್ಯ ಹೊಂದಿದರೆ ಜೀವನವೇ ಧನ್ಯತೆ
ಕಲ್ಲಂಥ ಹೃದಯದಲೂ ಪಡೆಯುವೆ ಮಾನ್ಯತೆ
ಕಠಿಣ ಪರಿಶ್ರಮದಿಂದ ಯಾರು ಸತ್ತವರಿಲ್ಲ
ಛಲವಿದ್ದರೆ ಪರ್ವತವನೂ ಏರಬಹುದಲ್ಲ
ವಿಶ್ವಾಸವಿರೆ ಕಲ್ಲಿನಲು ಹೂ ಅರಳಬಹುದು
ಕಷ್ಟಗಳೇ ಕುಗ್ಗಿ ತಲೆ ತಗ್ಗಿಸಬಹುದು
ಸೋಲನ್ನು ಅನುಭವೆಂದು ಪರಿಗಣಿಸೋಣ
ನಿರಾಶೆಗೆ ವಶರಾಗದೆ ಯಶಸ್ಸು ಗಳಿಸೋಣ
*ಅಶೋಕ ಬೇಳಂಜೆ*

.gif)

.gif)


0 Comments