*ಗೈರ್ ಮುರಧಫ್ ಗಝಲ್*
ಭಾವುಕತೆಯ ಮಡಿಲಲ್ಲಿ ನೆನಪುಗಳು
ಜೀವಂತ ಗೆಳತಿ
ಪೂವಿನೊಳಗಿನ ಗಂಧದಂತೆ ಎನ್ನೆದೆಯಲಿ
ಬೆಸದು ಕುಳಿತಿ
ತೋಳ್ತೆಕ್ಕೆಯಲಿ ಬಳಸಿ ಹಾಡುವಾಸೆ
ಪ್ರೇಮಗೀತೆ
ಭರದಿ ಬಳಿ ಬಂದು ಸಲ್ಲಾಪದಿ ತೊಡಗದೆ
ನೀನೇಕೆ ದೂರ ನಿಲ್ಲುತಿ
ಅನುಗಾಲ ಅಮೃತಧಾರೆಯೇ ಹರಿಸುವೆ
ಬಳಿ ಬಂದು ನಿಲ್ಲು
ಹೃದಯ ಕರೆಗೆ ಓಗೊಡದೆ ನೀನೇಕೆ
ಅಂಜಿದಂತೆ ನಡಿತಿ
ವಾತ್ಸಲ್ಯವೆರೆಯುವ ಕಣ್ಮಣಿಯಂತೆ
ನನ್ನೊಳಗಿರುವೆಯಲ್ಲವೇ
ಒಲವ ಬಯಸುವ ಮುದ್ದಾದ ಮನಸ್ಸಿಗೆಕೆ
ನೋವಾ ನೀಡುತಿ
ಅಶೋಕನ ಹೊಸಬಾಳಿಗೆ ಜೊತೆಯಾಗಿ
ಇಂದೇ ಬಂದು ಬಿಡು
ಸಂತಸದ ಸುಂದರ ಕ್ಷಣಗಳ ನಿರೀಕ್ಷಿಸದೆ
ಅಮಂಗಳವೇಕೆ ಹಾಡುತಿ
*ಅಶೋಕ ಬೇಳಂಜೆ*

.gif)

.gif)


0 Comments