*ಅಂಬೇಡ್ಕರ್ ಅವರು ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಶಕ್ತಿಯುತ ವಕ್ತಾರ:* *ಡಾ. ಕೆ ಎಸ್ ಕಾಂಬಳೆ*

 *ಅಂಬೇಡ್ಕರ್ ಅವರು ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ  ಶಕ್ತಿಯುತ ವಕ್ತಾರ:* 

*ಡಾ. ಕೆ ಎಸ್ ಕಾಂಬಳೆ* 




 ಹುಕ್ಕೇರಿ:ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಸಂವಿಧಾನದ ಶಿಲ್ಪಿ ಮಾತ್ರವಲ್ಲ, ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಶಕ್ತಿಯುತ ವಕ್ತಾರರಾಗಿದ್ದರು. ಅವರ ವಿಚಾರಗಳು ಇಂದಿನ ಯುವಜನತೆಗೆ ಬಹಳ ಪ್ರಸ್ತುತವಾಗಿವೆ ಎಂದು ಹಾರೂಗೇರಿಯ ಹಾ. ವಿ. ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕೆ ಎಸ್ ಕಾಂಬಳೆ ಹೇಳಿದರು.


ತಾಲೂಕಿನ ಸೋಲಾಪುರ ಗ್ರಾಮದಲ್ಲಿ ಕಳೆದ ಬುಧವಾರ ದಿ.15 ರಂದು ಭೀಮ ನಗರದ ಯುವಕರು ಆಯೋಜಿಸಿದ್ದ ವಿಶ್ವರತ್ನ ಮಹಾಮಾನವತಾವಾದಿ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡು ತಮ್ಮ ತವರೂರಿನ ಗ್ರಾಮಸ್ಥರು ನೀಡಿದ ಗೌರವ ಸಮ್ಮಾನ ಸ್ವೀಕರಿಸಿ ಅವರು 

ಮಾತನಾಡಿದರು.


 ಅಂಬೇಡ್ಕರ್ ಅವರು “ಶಿಕ್ಷಣವೇ ಶಕ್ತಿಯ ಮೂಲ” ಎಂದು ಅಪಾರವಾಗಿ ನಂಬಿದ್ದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಶಿಕ್ಷಣವೇ ಮುಖ್ಯ ಸಾಧನ. ಜ್ಞಾನವು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ, ಸಾಮಾಜಿಕ ಜಾಗೃತಿ ಮತ್ತು ವಿಮರ್ಶಾತ್ಮಕ ಚಿಂತನೆಗಾಗಿ ಬಹಳ ಅಗತ್ಯವಾಗಿದೆ ಎಂದರು.


  ಅಂಬೇಡ್ಕರ್ ಅವರು ಜಾತಿ, ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ನಡೆಯುವ ಭೇದಭಾವವನ್ನು ತೀವ್ರವಾಗಿ ವಿರೋಧಿಸಿದರು. ಇಂದಿನ ಯುವಕರು ಸಹ ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಲು, ಅನ್ಯಾಯದ ವಿರುದ್ಧ ನಿಲ್ಲಲು ಮುಂದಾಗಬೇಕು.

 ನಮ್ಮ ದೇಶದ ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸುತ್ತದೆ. ಯುವಕರು ತಮ್ಮ ಹಕ್ಕುಗಳ ಜೊತೆಗೆ ತಮ್ಮ ಕರ್ತವ್ಯಗಳನ್ನೂ ತಿಳಿದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಹಕರಿಸಬೇಕು.

 ಅಂಬೇಡ್ಕರ್ ಅವರು ಯಾವ ಪರಿಸ್ಥಿತಿಯಲ್ಲಿದ್ದರೂ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬೇಕು ಎಂದು ಬೋಧಿಸಿದರು. ಯುವಕರು ತಮ್ಮ ಮೇಲೆ ನಂಬಿಕೆ ಇಟ್ಟುಕೊಂಡು,ಬಂದೊದಗುವ ಅನೇಕ ಸಂಕಷ್ಟಗಳನ್ನು ಎದುರಿಸುವ ದಿಟ್ಟ ಧೈರ್ಯ ಬೆಳೆಸಿಕೊಳ್ಳಬೇಕು.

 ಅಂಬೇಡ್ಕರ್ ಅವರ ಸಮಗ್ರ ಜೀವನವೇ ಇಂದಿನ ಯುವಕರಿಗೆ ದಿವ್ಯ ಪ್ರೇರಣೆ.  ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಸೋದಾಹರಣವಾಗಿ ವಿಶ್ಲೇಷಿಸಿದರು.


ಇದೆ ಸಂದರ್ಭದಲ್ಲಿ ಕಳೆದ 2025-26 ನೇ ಸಾಲಿನ ದ್ವಿತೀಯ ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡ 11 ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.


ಶಶಿರಾಜ ಪಾಟೀಲ, ವಿಕ್ರಮ ಕರಸಿಂಗ್,ರಿಷಬ್ ಪಾಟೀಲ, ಮಹಾದೇವ ಕ್ಷೀರಸಾಗರ, ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ವಂದನಾ ನಾಯಕ, ಉಪಾಧ್ಯಕ್ಷ ಅಶೋಕ ಮಸ್ತಿ, ರಾಜು ಕೋರೆ, ಅನೀಲ ಖಾನಾಯಿ, ಅಜಿತ ಧನಗರ, ವಿಜಯ ತೋಡಕರ, ಹಸನ್ ಮುಲ್ಲಾ, ಹನುಮಂತ ಶೇಖನ್ನವರ, ಮಹೇಶಕುಮಾರ ತಳವಾರ,ಸಂಜು ಹಲಗೆ,ಅಜಿತ ಮುರಾರಿ ಹಾಗೂ ಅಕ್ಷಯ ಕಾಂಬಳೆ ವೇದಿಕೆ ಮೇಲೆ ಉಪಸ್ಥಿತರಿದ್ದರು.


ವರದಿ:ಡಾ. ಜಯವೀರ ಎ. ಕೆ.

        ಖೇಮಲಾಪುರ

Image Description

Post a Comment

0 Comments