ಚಲುವೆ ಅಂದ್ರೆ ನಿನ್ನ ಹಾಗೆ ಇರಬೇಕು.. 🌹

 ಚಲುವೆ ಅಂದ್ರೆ ನಿನ್ನ ಹಾಗೆ ಇರಬೇಕು.. 🌹


ಕಂಡಾಕ್ಷಣಾ ಮತ್ತೆ ಮತ್ತೆ ನೋಡಬೇಕು ಅನ್ನುವ ಹಾಗೆ ಇರಬೇಕು..

ನಿನ್ನ ಜೊತೆಗೆ ಮಾತಾಡಬೇಕು ಅಂತಾ ಮನಸು ಹಾತುರಿಯಬೇಕು

ನೀನು ಕಾನದಿದ್ದಾಗ ಮನಸು ಚಡಪಡಿಸಬೇಕು..

ನಿಜ್ವಾಗ್ಲೂ ಇದ್ದರೆ ನಿನ್ನ ಹಾಗೆ ಒಬ್ಬಳು ಪ್ರೇಮಿ ಇರಬೇಕು ಕಣೆ ಜೀವನ ಪೂರ್ತಿ ಪ್ರೀತಿ ಮಾಡುವ ಹಾಗೆ ಮನಸಿನ ಆಸೆ ಕೇಳುವ ಹಾಗೆ, ಮನಸು ಬಿಚ್ಚಿ ಮಾತಾಡುವ ಹಾಗೆ..

ಒಂದು ತರ ಇಬ್ಬರದೂ ಸ್ನೇಹ ತುಂಬಿದ ಪ್ರೇಮಲೋಕದ ಹಾಗೆ.. ಇರಬೇಕು..🌹

ಇಷ್ಟ ಇದ್ದರೆ ಹೇಳಿ ಬಿಡು.. ಹಾಗೆ ಇದ್ದು ಬಿಡೋಣ ಇಬ್ಬರು, ಪ್ರೇಮಿಗಳ ತರ ಕಣೆ 

ಆದ್ರೆ ಒಂದು ಮಾತು ನೀನು ಅಲ್ಲೆ ಇರು ನಾ ಇಲ್ಲೇ ಇರುವೆ..

ಆದ್ರೆ ನಮ್ಮ ಮಾತುಗಳು ಮಾತ್ರ ಹತ್ತಿರ ಇರಬೇಕು ಒಬ್ಬರಿಗೊಬ್ಬರದು.. ಪಿಸು ಗುಡುವ ಮಾತು ನಮ್ಮದು ಇಬ್ಬರದೂ.. ಹೇಳಿ ಬಿಡು ಚಲುವೆ ಒಮ್ಮೆ ಆದ್ರೂ ಹೀಗೆ ಇದ್ದು ಬಿಡೋಣ, ಇದು ಒಂದು ತರ ಚನ್ನಾಗಿ ಇದೆ. ಅನಿಸುತ್ತೆ..ನಮ್ಮದೇ ಪ್ರೇಮ ಲೋಕ ಸೃಷ್ಟಿ ಮಾಡೋಣ ಇಬ್ಬರು ಸೇರಿ.. ❤️


ಕಾಯುತಿರುವೆ ನಿನ್ನ ಮಾತಿಗೆ.. ನಾ.. 🌹❤️..


✍️ನೀರಲಗಿ ಶರಣಪ್ಪ... 🌹

Image Description

Post a Comment

0 Comments