* ಚಿತ್ರಕವನ
*ಬೆಂಗಾವಲು*
ಸೈಕಲ್ಲಿನ ಚಕ್ರದಂತೆ ತಿರುಗೊ ಈ ಜೀವನಯಾನ
ಪತಿ ಪತ್ನಿ ಏಕತೆಯಿಂದ ಚಲಿಸಿದಲ್ಲಿ ಸುಗಮಯಾನ
ವಿವಾಹವು ತಾಯ್ತನವು ಅಡ್ಡಿಯಲ್ಲ ನಿನ್ನ ಸಾಧನೆಗೆ
ಆತ್ಮಸ್ಥೈರ್ಯದಿಂದ ನುಗ್ಗು ನಾನಿರುವೆ ಗುರಿ ಕಡೆಗೆ
ಸಾಗುತ್ತಲೇ ಇರು ನೀ ಯಶಸ್ಸಿನ ಹಾದಿಯಲ್ಲಿ
ಬೆಂಗಾವಲಾಗಿರುವೆ ನಾ ನಿನ್ನ ಜೊತೆಯಲ್ಲಿ
ಪರಿಸ್ಥಿತಿಗೆ ಅಡೆ ತಡೆಗಳಾವುದು ಅಡ್ಡಿಯಾಗದಿರಲಿ
ನಿಶ್ಚಿಂತೆಯಲಿ ಮುನ್ನಡೆ ಉಳಿದ ಜವಾಬ್ದಾರಿ ನನಗಿರಲಿ
ನಲ್ಲೆ...ನೀನೇ ನನ್ನ ಜೀವನದ ನಾಯಕಿ
ನೂರು ಕನಸಿಗೂ ಚೈತನ್ಯ ತುಂಬೊ ಮಾಲಕಿ
ಹೊಸ ದಾರಿನೇ ತೆರೆದಿದೆ ನೋಡಲ್ಲಿ
ಹರುಷವೇ ತುಂಬಿ ತುಳುಕಿದೆ ಬಾಳಿನಲಿ
ನಮ್ಮ ಬಾಳಾಟವೇ ನಗು ಚೆಲ್ಲಿದ ಸಡಗರ
ಸುತ್ತಲಿದೆ ಪ್ರಕೃತಿ ಸೌಂದರ್ಯದ ಹಂದರ
ಭರವಸೆ ನಮಗೆ ಬೆಳಕು ಚೆಲ್ಲೋ ಭಾಸ್ಕರ
ದೇವರ ಆಶೀರ್ವಾದ ಈ ನಮ್ಮ ಸುಂದರ ಸಂಸಾರ
*ಅಶೋಕ ಬೇಳಂಜೆ*

.gif)

.gif)


0 Comments