ಜನಗಣತಿ 2027 ಕಾಗದ ರಹಿತವಾಗಿದೆ : ಸುರೇಶ್ ಮುಂಜೆ

 ಜನಗಣತಿ 2027 ಕಾಗದ ರಹಿತವಾಗಿದೆ : ಸುರೇಶ್ ಮುಂಜೆ 



ನಿಪ್ಪಾಣಿ: ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ದೇಶದ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿಂದೆ ಪ್ರತಿಯೊಂದು ಜನಗಣತಿಯು ಕಾಗದದ ಸಹಿತ ಗಣತಿದಾರರು ಜನಗಣತಿಯನ್ನು ಮಾಡುತ್ತಿದ್ದರು. ಆದರೆ ಇಂದಿನ 2027ರ ಜನಗಣತಿ ಕಾಗದ ರಹಿತ ಜನಗಣತಿಯಾಗಿದೆ ಎಂದು ನಿಪ್ಪಾಣಿ ತಾಲೂಕಿನ ತಹಸಿಲ್ದಾರ್ ಅಥವಾ ಜನಗಣತಿ ಚಾರ್ಜ್ ಅಧಿಕಾರಿ ಸುರೇಶ್ ಮುಂಜೆ ತಿಳಿಸಿದರು. 


ನಿಪ್ಪಾಣಿಯ ಜಿ.ಅಯ್ ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ನಿಪ್ಪಾಣಿ ತಾಲೂಕಿನ ಎರಡನೇ ಹಂತದ 'ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ' ತರಬೇತಿ ಕಾರ್ಯಾಗಾರದಲ್ಲಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. 


ಈ ಜನಗಣತಿಯಲ್ಲಿ ಡಿಜಿಟಲ್ ಮೂಲಕ ಗಣತಿ ಮಾಡುವುದರಿಂದ ಅಧಿಕೃತ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಸಮಯ ಉಳಿಸುವ ಮೂಲಕ ಹಾಗೂ ಪ್ರಗತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಇದು ಸಾಧ್ಯವಾಗುತ್ತದೆ. ಸಂಗ್ರಹಿಸಿದ ದತ್ತಾಂಶವು ನಿಖರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು. 

ಜನಗಣತಿ ಕಾರ್ಯದಲ್ಲಿ ನೀವು ಭಾಗವಹಿಸುತ್ತಿರುವುದ ನಿಮ್ಮ ಜೀವನದ ಬಹುಮುಖ್ಯ ಕಾರ್ಯವಾಗಿದೆ. ಮೊದಲ ಹಂತದಲ್ಲಿ ಮನೆಗಣತಿ ಮಾಡುತ್ತಿರಿ ಎರಡನೇ ಹಂತದಲ್ಲಿ ಜನಗಣತಿಯನ್ನು ಮಾಡುತ್ತಿರಿ ಎಂದು ಮೊದಲ ಹಂತ ಮತ್ತು ಎರಡು ಹಂತದ ಗಣತಿಯ ಬಗ್ಗೆ ಮಾಹಿತಿ ನೀಡಿದರು. 


ವೇದಿಕೆಯಲ್ಲಿ ಉಪಸ್ಥಿತರಿದ್ದ ನಿಪ್ಪಾಣಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವಿ ನಾಯಿಕ ಮಾತನಾಡುತ್ತಾ ಜನಗಣತಿ ಗುರಿ ಉದ್ದೇಶಗಳನ್ನು ತಿಳಿಸಿದರು. ಈ ಜನಗಣತಿಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂದು ಸೂಕ್ಷ್ಮವಾಗಿ ತಿಳಿಸಿದರು. ಸಮಯಕ್ಕೆ ಸರಿಯಾಗಿ ಬಂದು ಮೂರು ದಿನಗಳ ಕಾಲ ಉತ್ತಮವಾದ ತರಬೇತಿಯನ್ನು ಪಡೆದು ಉತ್ತಮ ಗಣತಿದಾರಾಗಿ ಹೊರ ಬರಬೇಕೆಂದು ತಿಳಿಸಿದರು. 


ನಿಪ್ಪಾಣಿ ನಗರಸಭೆಯ ಇ ಎ ಓ ಸಂಪತ್ ಕುರಣೆ ಅವರು ಮಾತನಾಡುತ್ತಾ ದೇಶದ ಅಭಿವೃದ್ಧಿಗೆ ಜನಗಣತಿ ಬೇಕು. ದೇಶದ ಅಭಿವೃದ್ಧಿಗೆ ನಾವು ನೀವೆಲ್ಲರೂ ಸೇರಿ ತ್ಯಾಗ ಮನೋಭಾವದಿಂದ ಪ್ರಾಮಾಣಿಕ ಕೆಲಸ ಮಾಡಬೇಕೆಂದು ಗಣತಿದಾರರಿಗೆ ಕರೆ ನೀಡಿದರು. 


ಕಾರ್ಯಕ್ರಮದಲ್ಲಿ ತರಬೇತಿಗೆ ನಾಡಗೀತೆ ಹಾಡುವ ಮೂಲಕ ಪ್ರಾರಂಭಿಸಲಾಯಿತು. ವೇದಿಕೆಯಲ್ಲಿ ಜೋಷಿ, ಹತ್ತು ಕ್ಷೇತ್ರ ಸಂಪನ್ಮೂಲ ತರಬೇತಿದಾರರು, 144 ಜನಗಣತಿ ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು. ಕ್ಷೇತ್ರ ತರಬೇತಿದಾರಾದ ಬೇಡಕಿಹಾಳದ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಸ್ವಾಗತಿಸಿದರು. ತರಬೇತಿಯ ಮೂಲ ಮಾಹಿತಿಯನ್ನು ಕುರಿತು ಪ್ರಾಸ್ತಾವಿಕವಾಗಿ ಕ್ಷೇತ್ರ ಸಂಪನ್ಮೂಲ ತರಬೇತಿದಾರಾದ ಲಕ್ಷ್ಮಣ್ ಕೋಣೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ್ ಕಾಗೆ ನಿರೂಪಿಸಿದರು. ಸಂತೋಷ್ ಪಾಟೀಲ್ ವಂದಿಸಿದರು. ತಾಲೂಕು ಆಡಳಿತ, ನಗರಸಭೆ, ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Image Description

Post a Comment

0 Comments